ನೆಲ್ಯಾಡಿ: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿಗಳು 3 ಚಿನ್ನದ ಪದಕ, 1 ಬೆಳ್ಳಿಪದಕ, 4 ಕಂಚಿನ ಪದಕ ಪಡೆದುಕೊಂಡಿರುತ್ತಾರೆ.
ಬಾಲ ವರ್ಗದ ಉದ್ದ ಜಿಗಿತದಲ್ಲಿ ಮನೀಶ್ ಬಿ ಶೆಟ್ಟಿ ಚಿನ್ನದ ಪದಕ, ಕಿಶೋರ ವರ್ಗ ಎತ್ತರ ಜಿಗಿತದಲ್ಲಿ ಗುರುಕಿರಣ್ ಚಿನ್ನದ ಪದಕ, ಬಾಲವರ್ಗ 100 ಮೀಟರ್ ಓಟದಲ್ಲಿ ಮನೀಶ್ ಬಿ ಶೆಟ್ಟಿ ಚಿನ್ನದ ಪದಕ.
ಕಿಶೋರ ವರ್ಗ 100ಮೀಟರ್ ಓಟದಲ್ಲಿ ಗುರುಕಿರಣ್ ಬೆಳ್ಳಿಪದಕ. ಬಾಲ ವರ್ಗ 100×4 ರಿಲೇಯಲ್ಲಿ ಕಂಚಿನ ಪದಕ ಮನೀಶ್, ಚಿರಾಯು, ಸುಶಾಂತ್, ಅಖಿಲ್. 1500 ಮೀಟರ್ ಓಟದಲ್ಲಿ ಚೇತನ್ ಕಂಚಿನ ಪದಕ. 400 ಮೀಟರ್ ಓಟದಲ್ಲಿ ಭೂಮಿಕಾ ಕಂಚಿನ ಪದಕ. 800 ಮೀಟರ್ ಓಟದಲ್ಲಿ ಹರ್ಷಾಲಿ ಕಂಚಿನ ಪದಕ.
2 ಚಿನ್ನದ ಪದಕ ಪಡೆದ ಮನೀಷ್ ಬಿ ಶೆಟ್ಟಿ ಮತ್ತು 1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದ ಗುರುಕಿರಣ್ ಒಕ್ಟೋಬರ್ 11, 12, 13 ರಂದು ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದಾರೆ.