ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ಕೊರಮೇರು ಎಂಬಲ್ಲಿ ರಸ್ತೆ ಪಕ್ಕದಲ್ಲಿರುವ ಹಳ್ಳಕ್ಕೆ ರಾಸಾಯನಿಕ ಸೇರಿ ಕೆಲವು ಮೀನುಗಳು ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 11ರಂದು ಸಂಭವಿಸಿದೆ.
ಹಳ್ಳದಲ್ಲಿ ಹರಿಯುತ್ತಿರುವ ನೀರಿನಲ್ಲಿ ಕಪ್ಪನೆಯ ಎಣ್ಣೆ ಮಿಶ್ರಿತ ಪದಾರ್ಥವು ಕಾಣಿಸಿಕೊಂಡಿದ್ದು ಮೀನುಗಳು ಕೂಡ ಸತ್ತುಬಿದ್ದಿವೆ.
ಟ್ಯಾಂಕರ್ ತೊಳೆದ್ದು ನೀರನ್ನು ಹೆದ್ದಾರಿ ಸಮೀಪದಲ್ಲಿ ಬಿಡಲಾಗಿ, ಅದರಲ್ಲಿನ ರಾಸಾಯನಿಕ ಅಂಶವು ಮಳೆಯ ನೀರಿನೊಂದಿಗೆ ಹಳ್ಳಕ್ಕೆ ಸೇರಿ ಈ ಘಟನೆ ಸಂಭವಿಸಿರಬಹುದೆಂದು ಊಹಿಸಲಾಗಿದೆ. ಹಳ್ಳದ ಮೇಲ್ಭಾಗದಲ್ಲಿ ರಸ್ತೆ ಬದಿಯಲ್ಲಿಯೂ ಈ ರೀತಿಯ ಎಣ್ಣೆ ಅಂಶಗಳು ಕಂಡುಬಂದಿದ್ದು ವಾಹನಗಳನ್ನು ತೊಳೆಯುವ ಮುಖಾಂತರವೇ ಈ ರಾಸಾಯನಿಕ ಈ ಪ್ರದೇಶದಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಹೆಡ್‍ಕಾನ್‍ಸ್ಟೇಬಲ್ ಬಾಲಕೃಷ್ಣ, ಕುಶಾಲಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.