ಉಪ್ಪಿನಂಗಡಿ: ಪ್ರತಿಷ್ಠಿತ ಜೇಸಿಐ ಉಪ್ಪಿನಂಗಡಿ ಘಟಕದ 2020ರ ಸಾಲಿನ 42 ನೇ ಅಧ್ಯಕ್ಷರಾದ ಜೇಸಿ HGF ಶಶಿಧರ್ ನೆಕ್ಕಿಲಾಡಿಯವರಿಗೆ ವಲಯ 15ರ ವ್ಯವಹಾರ ಸಮ್ಮೇಳನ “ಸಂಚಲನ” ಸಾಧಕರ ಸಮಾಗಮದಲ್ಲಿ ವಲಯ ಜೇಸಿ ಸದಸ್ಯರ ಸಾಧನೆಯನ್ನು ಗುರುತಿಸಿ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ *”ಸಮಾಜ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಿದೆ.
ಜೇಸಿ ಶಶಿಧರ್ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದರು.2014 ರಲ್ಲಿ ಉಪ್ಪಿನಂಗಡಿ ಘಟಕ ಸದಸ್ಯರಾಗಿ ಜೇಸಿಐ ಆಂದೋಲನಕ್ಕೆ ಸೇರಿಕೊಂಡವರು. ನಂತರ
2016ರಲ್ಲಿ ಘಟಕದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸುದ್ದಿ ಬಿಡುಗಡೆ ಪುತ್ತೂರು, ಹೊಸದಿಗಂತ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರು. 2020ರಲ್ಲಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮನುಷ್ಯ ಸಂಕುಲವನ್ನು ಕಾಡಿದ ಕರೋನ ರೋಗದಿಂದ ತೊಂದರೆಗೆ ಒಳಗಾದ ತೀರ ಬಡತನದ ಮನೆಗಳಿಗೆ ಆಹಾರ ಕಿಟ್ ವಿತರಣೆ,ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಂಡರು. ಜಗತ್ತು ಕೋವಿಡ್ ಕಾರಣದಿಂದ ಜನರ ಓಡಾಟ ಸ್ಥಗಿತಗೊಂಡ ಸಂದರ್ಭದಲ್ಲಿ ಆನ್ಲೈನ್ ತರಗತಿಗಳಿಗೆ, ತರಬೇತಿಗಳಿಗೆ ಸಭೆಗಳಿಗೆ ವೇದಿಕೆ ಸಿದ್ಧಗೊಂಡಾಗ, ಘಟಕದ ಕಾರ್ಯಕ್ರಮಗಳನ್ನು ಆನ್ಲೈನ್ ತರಬೇತಿಗಳನ್ನು ಆಯೋಜಿಸಿದರು. ಕೋವಿಡ್ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರ್ಯಕರ್ತರಿಗೆ ಸನ್ಮಾನ, ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ತೂಗುಯ್ಯಾಲೆಯ ಕೊಡುಗೆ, ಶಾಲೆಗಳಿಗೆ ವಿವಿಧ ಉಪಕರಣಗಳ ಕೊಡುಗೆ, ಸಮಾಜದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ, ವಲಯ ಮತ್ತು ಜೇಸಿಐ ಭಾರತದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕೈಗೊಂಡ ಕ್ರಮಗಳು, ಜೇಸಿಯ ಅನೇಕ ತರಬೇತಿಗಳಿಗೆ ವೇದಿಕೆ ಕಲ್ಪಿಸಿರುವ ಪ್ರಯತ್ನ, ಸಮಾಜಮುಖಿ ಕೆಲಸ ನಿರ್ವಹಿಸಿದಕ್ಕೆ ಜೇಸಿಯ ವಲಯ ಮತ್ತು ರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ, ಮನ್ನಣೆಗೆ ಪಾತ್ರರಾದರು.
ಇವರ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿಯೂ ಜೇಸಿ ಸಂಸ್ಥೆಯ ಮೂಲಕ ಯುವಜನತೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದು ಕೊಕ್ಕಡದಲ್ಲಿ ಕಪಿಲ ಜೇಸಿಐ ಘಟಕ ಸ್ಥಾಪಿಸಿದರು. ಆ ಮೂಲಕ ಗ್ರಾಮೀಣ ಭಾಗದಲ್ಲಿಯೂ ಜೇಸಿ ಆಂದೋಲನವನ್ನು ಪಸರಿಸುವ ಕೀರ್ತಿಗೆ ಭಾಜನರಾದರು.
ಘಟಕದ ಪೂರ್ವಾಧ್ಯಕ್ಷರಾಗಿ ಮತ್ತು ಸ್ಥಳೀಯ ಅನೇಕ ಸಂಘ ಸಂಸ್ಥೆಯ ಸದಸ್ಯರಾಗಿ, ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.