ಯುವಮೋರ್ಚಾದ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ಪೂರ್ವಭಾವಿ ಸಭೆ

ಶೇರ್ ಮಾಡಿ

ಬೆಳ್ತಂಗಡಿ: ಅ 14 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ಆಶ್ರಯದಲ್ಲಿ ಶಾಸಕರಾದ ಹರೀಶ್ ಪೂಂಜಾ ರವರ ಕಲ್ಪನೆ ಯಂತೆ ಯುವಮೋರ್ಚಾ ದ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬದಂದು ಹಮ್ಮಿಕೊಂಡಿರುವ ದೋಸೆ ಹಬ್ಬ ಹಾಗೂ ಪೇಟೆಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ವಿಶೇಷ ಸಾಂಸ್ಕೃತಿಕ, ಭಜನೆ, ಸಭಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಾನ್ಯ ಶಾಸಕರು ಮಾತನಾಡಿ ಕಾರ್ಯಕ್ರಮದ ಪ್ರತಿ ವರ್ಷದಂತೆ ಈ ಬಾರಿಯೂ ಹಿಂದಿನ ಬಾರಿಗಿಂತಲು ವಿಜ್ರಂಭಣೆಯಿಂದ ದೋಸೆ ಹಬ್ಬವನ್ನು ನಡೆಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿ ಗಳಾದ ವಿನೀತ್ ಸಾವ್ಯ, ಉಮೇಶ್ ಗುರುವಾಯನಕೆರೆ, ಯುವಮೋರ್ಚಾ ಪ್ರಭಾರಿ ಸೀತಾರಾಮ್ ಬೆಳಾಲು ಉಪಸ್ಥಿತರಿದ್ದರು.ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರು, ಮಂಡಲದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಯುವಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷತೆ:

5 ಕ್ವಿಂಟಾಲ್ ಅಕ್ಕಿಹಿಟ್ಟಿನ ದೀಪಾವಳಿ ದೋಸೆ..
ಪಟ್ಟಣದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ.
ಬೆಳಗ್ಗೆ ,ಸಂಜೆ ,ರಾತ್ರಿ ಅಂತ ಮೂರು ವಿಭಾಗ ಮಾಡಿ ಮಹಾಶಕ್ತಿ ಕೇಂದ್ರಗಳಿಗೆ ಕಾರ್ಯಕ್ರಮದ ಜವಬ್ದಾರಿ.
ತಾಲೂಕಿನ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ
ವಿಶೇಷ ಭಜನಾ ತಂಡದಿಂದ ಭಜನೆ.
ರಾತ್ರಿ 1500 ಕ್ಕಿಂತ ಅಧಿಕ ಹಣತೆ ಪ್ರಜ್ವಲನೆ.
ಸುಡುಮದ್ದು ಪ್ರದರ್ಶನ
ಸಾಂಸ್ಕೃತಿಕ ವೈಭವ
ರಾತ್ರಿ ನಾಟಕ ಪ್ರದರ್ಶನ ನಡೆಯಲಿದೆ.

Leave a Reply

error: Content is protected !!