ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆರಂಭಗೊಂಡ Pre IGC II ಮತ್ತು CATC ಶಿಬಿರ

ಶೇರ್ ಮಾಡಿ

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ, ಮಡಿಕೇರಿ ಇದರ ಆಶ್ರಯದಲ್ಲಿ Pre IGC II ಮತ್ತು CATC ಶಿಬಿರ ಅಕ್ಟೋಬರ್ 15ರಂದು ಆರಂಭಗೊಂಡಿದ್ದು ಈಗಾಗಲೇ ಮಂಗಳೂರು, ಉಡುಪಿ, ಮಡಿಕೇರಿ, ಶಿವಮೊಗ್ಗ ಜಿಲ್ಲೆಯ ಎನ್ ಸಿ ಸಿ ಕೆಡೆಟ್ ಗಳು ಎನ್ನೆಂಸಿಯತ್ತ ಆಗಮಿಸುತ್ತಿದ್ದಾರೆ.
ಈ ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಕೆಡೆಟ್ ಗಳ ಎರಡನೇ ಹಂತದ ಆಯ್ಕೆ ಶಿಬಿರ ಮತ್ತು ಕಂಬೈನ್ಡ್ ಆನ್ವಲ್ ಟ್ರೈನಿಂಗ್ ಕ್ಯಾಂಪ್ ಎಂಬ ಎರಡು ರೀತಿಯ ಶಿಬಿರಗಳು ನಡೆಯಲಿದೆ.

ಗಣರಾಜ್ಯೋತ್ಸವ ಪೆರೇಡ್ ಗೆ ಒಟ್ಟು 7 ಆಯ್ಕೆ ಶಿಬಿರಗಳು ನಡೆಯಲಿದ್ದು, ಮಂಗಳೂರು ಗ್ರೂಪ್ ಹಂತದಲ್ಲಿ 3 ಶಿಬಿರಗಳು ನಡೆಯಲಿದೆ. ಅದರ ಎರಡನೇ ಹಂತದ ಶಿಬಿರ ಇದಾಗಿದ್ದು, ಈಗಾಲೇ ಮಂಗಳೂರಿನಲ್ಲಿ ನಡೆದ ಮೊದಲ ಹಂತದ ಶಿಬಿರದಲ್ಲಿ ಆಯ್ಕೆಯಾದ 180 ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಆಯ್ಕೆಯಾದ ಕೆಡೆಟ್ ಗಳು ಮೂರನೇ ಹಂತದ ಆಯ್ಕೆ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಕಂಬೈನ್ಡ್ ಆನ್ವಲ್ ಟ್ರೈನಿಂಗ್ ಕ್ಯಾಂಪ್ ನಲ್ಲಿ ಸುಮಾರು 245 ಕೆಡೆಟ್ ಗಳು ಭಾಗವಹಿಸಲಿದ್ದು ಒಟ್ಟು 425 ಎನ್ ಸಿ ಸಿ ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದ ಸಂಪೂರ್ಣ ಉಸ್ತುವಾರಿಯನ್ನು ಕರ್ನಲ್ ಜೆಫ್ರಿನ್ ಗಿಲ್ ಬರ್ಟ್ ಅರನ್ಹಾ ವಹಿಸಲಿದ್ದು ವಿವಿಧ ಬೆಟಾಲಿಯನ್ ನ ಅಧಿಕಾರಿಗಳು, ವಿವಿಧ ಕಾಲೇಜಿನ ಅಸೋಸಿಯೇಟ್ ಎನ್ ಸಿ ಸಿ ಆಫೀಸರ್ ಗಳು ಭಾಗವಹಿಸುತ್ತಿದ್ದು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದರ ಮಾರ್ಗದರ್ಶನದಲ್ಲಿ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಲೆ.ಸೀತಾರಾಮ ಎಂ.ಡಿ ಯವರು ಶಿಬಿರದ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಶಿಬಿರದ ಅಧಿಕೃತ ಉದ್ಘಾಟನೆಯು ನಾಳೆ ಅ.16ರಂದು ನಡೆಯಲಿದ್ದು, ಡಾ.ಕೆ.ವಿ ಚಿದಾನಂದರು ಉದ್ಘಾಟಿಸಲಿದ್ದಾರೆ.

Leave a Reply

error: Content is protected !!