ಯಕ್ಷಗಾನ ತಂಡ – ಯಕ್ಷತರಂಗದ ಉದ್ಘಾಟನಾ ಕಾರ್ಯಕ್ರಮ

ಶೇರ್ ಮಾಡಿ

ಸುಬ್ರಹ್ಮಣ್ಯ: ಕೆ ಎಸ್ ಎಸ್ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಐಕ್ಯೂಎಸಿ‌ ಘಟಕ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ದಿನಾಂಕ 17 -10- 2022 ರಂದು ಯಕ್ಷಗಾನ ತಂಡ ಯಕ್ಷ ತರಂಗದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಯಕ್ಷಗಾನ ತರಬೇತುದಾರರಾದ ಪ್ರಸಾದ್ ಸವಣೂರು ಅವರು ಉದ್ಘಾಟನೆ ನೆರವೇರಿಸಿ, ಯಕ್ಷಗಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ ಗೋವಿಂದ ಎನ್ ಎಸ್ ಇವರು ಯಕ್ಷಗಾನದ‌ ಮಹತ್ವದ ಕುರಿತು ವಿವರಿಸಿದರು.
ಯಕ್ಷತರಂಗದ ಸಂಯೋಜಕರಾದ ಶ್ರೀಮತಿ ಶಶಿ.ಕೆ ಮತ್ತು ಅಕ್ಷಿತ್ ಕುಮಾರ್ ಶೇಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪೂಜಾ ಕೆ ಎಸ್ ಸ್ವಾಗತಿಸಿ, ಶರತ್ ಕೆ ಎನ್ ವಂದಿಸಿದರು. ಕೃತಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು

Leave a Reply

error: Content is protected !!