ಶಿಶಿಲ: ಮಿಂಚಿನ ಕಾರ್ಯಚರಣೆಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 9 ಜನರನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

ಶೇರ್ ಮಾಡಿ

ಶಿಶಿಲ: ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕಂಚಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಪಡೆದ ಧರ್ಮಸ್ಥಳ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ 9 ಜನರು ಸುತ್ತುವರಿದು ಕುಳಿತು ಇಸ್ಪೀಟ್ ಎಲೆಗಳನ್ನು ಉಪಯೋಗಿಸಿ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಪೀಟ್ ಆಡುತ್ತಿದ್ದವರನ್ನು ಹಿಡಿದು ವಿಚಾರಿಸಿ ಟಾರ್ಪಲ್ ನಲ್ಲಿ ಹಾಕಿದ್ದ 52 ವಿವಿಧ ಜಾತಿಯ ಇಸ್ಪೀಟ್ ಎಲೆಗಳನ್ನು ಹಾಗೂ ಪಣವಾಗಿಟ್ಟ ನಗದು ರೂ 11.370 /- ಹಾಗೂ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮಾರುತಿ ಓಮಿನಿ ಕಾರು ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ನಗದು ಹಾಗೂ ಸೊತ್ತುಗಳ ಅಂದಾಜು ಮೌಲ್ಯ ರೂ.1,01,370 ಆಗಿರುತ್ತದೆ.

ಪ್ರಕರಣದಲ್ಲಿ ಭಾಗಿಯಾದ ಓಟ್ಲ ಮನೆ ಶಿಶಿಲ ಗ್ರಾಮದ ದೇಜಪ್ಪ ಪೂಜಾರಿಯವರ ಮಗ ವೆಂಕಪ್ಪ. ಪರಾರಿ ಬಾಳೆ ಹಿತ್ತಿಲು, ಶಿಶಿಲ ಗ್ರಾಮದ ರುಕ್ಮಯ್ಯ ಗೌಡ ರವರ ಮಗ ವಸಂತ ಗೌಡ. ನಾಗನಡ್ಕ ಮನೆ ಶಿಶಿಲ ಗ್ರಾಮದ ನೇಮಣ್ಣ ಗೌಡರ ಮಗ ಕೃಷ್ಣಪ್ಪಗೌಡ. ಐಂಗುಡ ಮನೆ ಶಿಬಾಜೆ ಗ್ರಾಮದ ಮೋನಪ್ಪ ಗೌಡರ ಮಗ ಶಿವರಾಮ ಗೌಡ. ಅಂಬೆತ್ತಡ್ಕ ಮನೆ ಶಿಶಿಲ ಗ್ರಾಮದ ಲಿಂಗಪ್ಪ ಗೌಡರ ಮಗ ಸದಾಶಿವ. ಮುಳಿಮಜಲು ಮನೆ ಕಡಬ ಗ್ರಾಮದ ಗುರುವ ರವರ ಮಗ ಪೊಡಿಯಾ. ಅಂಬೆತ್ತಡ್ಕ ಮನೆ ಶಿಶಿಲ ಗ್ರಾಮದ ಲಿಂಗಪ್ಪ ಗೌಡರ ಮಗ ಹೊನ್ನಪ್ಪ ಗೌಡ. ಮುಚ್ಚಿರಡ್ಕ ಮನೆ ಶಿಶಿಲ ಗ್ರಾಮದ ಮಾಯಿಲಪ್ಪ ಗೌಡರ ಮಗ ಸುರೇಶ. ಮುಳಿಮಜಲು ಮನೆ ಕಡಬ ಗ್ರಾಮದ ಅಂಬೋಡಿ ರವರ ಮಗ ಕೇಶವ ರವರನ್ನು, ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅನಿಲ ಕುಮಾರ. ಡಿ, ಹೆಡ್‍ಕಾನ್‍ಸ್ಟೇಬಲ್ ಗಳಾದ ಶೇಖರ, ಪ್ರಶಾಂತ, ಬೆನ್ನಿಚನ್, ಪಿ.ಸಿ ಗಳಾದ ವಿನಯ ಪ್ರಸನ್ನ, ದೀಪು ಭಾಗವಹಿಸಿದರು.

See also  ಉಡುಪಿ: ಪೊಲೀಸ್ ನಿರೀಕ್ಷಕರ ಸೈಕಲ್ ಕಳವು! ದೂರು ದಾಖಲು

Leave a Reply

Your email address will not be published. Required fields are marked *

error: Content is protected !!