ಬೂಡುಜಾಲು ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಮದ್ಯ ಸೇವಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಧರ್ಮಸ್ಥಳ ಪೊಲೀಸರು

ಶೇರ್ ಮಾಡಿ

ನಿಡ್ಲೆ: ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬೂಡುಜಾಲು ಸಾರ್ವಜನಿಕ ಬಸ್ಸು ತಂಗುದಾಣ ಬಳಿ ಮದ್ಯ ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಧರ್ಮಸ್ಥಳದ ಪಿಎಸ್ಐ ಹಾಗೂ ಅವರ ತಂಡದವರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದುಕೊಂಡ ಘಟನೆ ಅಕ್ಟೋಬರ್ 18ರ ಮಧ್ಯಾಹ್ನ ನಡೆದಿದೆ.
ನಿಡ್ಲೆ ಗ್ರಾಮದ ಬೂಡುಜಾಲು ಸಾರ್ವಜನಿಕ ಬಸ್ಸು ತಂಗುದಾಣದ ಹಿಂಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು, ಒಬ್ಬ ವ್ಯಕ್ತಿಯು ಮದ್ಯ ಕುಡಿಯುತ್ತಿದ್ದು ಪೊಲೀಸರು ಪರಿಶೀಲಿಸಿದಾಗ ಎರಡು ಮದ್ಯದ ಬಾಟಲಿ ಹಾಗೂ ಗಾಜಿನ ಲೋಟ ಪತ್ತೆಯಾಗಿದ್ದು. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವುದು ಹಾಗೂ ಮದ್ಯ ಸೇವನೆಗೆ ಸಹಕರಿಸಿರುವುದು ದೃಢಪಟ್ಟ ಮೇರೆಗೆ ಸಂಜೀವ ಪೂಜಾರಿ(ವ.57) ಮತ್ತು ಶ್ರೀಕಾಂತ(ವ.54) ನನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ಪಿಎಸ್ಐ ಅನಿಲ ಕುಮಾರ.ಡಿ., ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

See also  ಮುಳ್ಳು ಹಂದಿ ಶಿಕಾರಿಗೆ ಸುರಂಗಕ್ಕೆ ನುಗ್ಗಿದ ಇಬ್ಬರ ಮೃತ್ಯು

Leave a Reply

Your email address will not be published. Required fields are marked *

error: Content is protected !!