ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮೆದುಳಿನ ನರ ದೌರ್ಬಲ್ಯದಿಂದ ಬಲಿ

ಶೇರ್ ಮಾಡಿ

ಶಿಶಿಲ : ಮೆದುಳಿನ ನರ ದೌರ್ಬಲ್ಯ ನಿಂದ ಬಳಲುತ್ತಿದ್ದ ಶಿಶಿಲ ಗ್ರಾಮದ ಒಟ್ಲ ನಿವಾಸಿ ದೇವರಾಜ್ ಹಾಗು ಜಾನಕಿ ದಂಪತಿಗಳ ಪುತ್ರಿ ಶಿಲ್ಪ(33) ಅಕ್ಟೋಬರ್ 20ರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶಿಲ್ಪ ಕಳೆದ ಹಲವು ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಡಬ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದೇವರಾಜ್ ದಂಪತಿಗಳ ಐವರ ಪುತ್ರಿಯರಲ್ಲಿ ಕೊನೆಯವಳಾದ ಈಕೆ ಮನೆಗೆ ಆಧಾರವಾಗಿದ್ದರು. ಕಳೆದ 9 ತಿಂಗಳಿನಿಂದ ಮೆದುಳಿನ ನರ ದೌರ್ಬಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರ ಚಿಕಿತ್ಸೆಗಾಗಿ ಹಲವು ಸಂಘ-ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಸಹಾಯ ಮಾಡಿದ್ದರು.
ಮೃತರಿಗೆ ತಂದೆ ದೇವರಾಜ್, ತಾಯಿ ಜಾನಕಿ ಹಾಗೂ ನಾಲ್ವರು ಸಹೋದರಿಯರಾದ ಸುನಂದ, ಸುಮಿತ್ರ , ಅನಿತಾ, ಗಾಯತ್ರಿ ಇದ್ದಾರೆ.

Leave a Reply

error: Content is protected !!