
ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ದೀಪಗಳ ಹಬ್ಬ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕರಾದ ರೆ.ಫಾ.ಹನಿ ಜೇಕಬ್ ದೀಪವನ್ನು ಬೆಳಗಿಸುವುದರ ಮೂಲಕ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಶಿಕ್ಷಕರಾದ ದಿಲೀಪ್ ದೀಪಾವಳಿ ಮಹತ್ವವನ್ನು ತಿಳಿಸಿದರು. ಸೈಂಟ್ ಆಂಟನೀಸ್ ಹೈಸ್ಕೂಲ್ ಹಾಗು ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆ, ಈ ಎರಡೂ ಸಂಸ್ಥೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನೆಲ್ಯಾಡಿ ಗಣೇಶ್ ಸ್ಟೋರ್ ಮಾಲಕರಾದ ದಿನೇಶ್ ಟಿ ಎಮ್ ಹಾಗೂ ಪೂರ್ವವಿದ್ಯಾರ್ಥಿ ಅಜಿತ್ ಓರ್ಕಳ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವ್ಯವಸ್ಥೆ ಮಾಡಿದ್ದರು. ಬಳಿಕ ಅಜಿತ್ ಓರ್ಕಳ ಪ್ರಾಯೋಜಿಸಿದ್ದ ಪಟಾಕಿಯನ್ನು ವಿದ್ಯಾರ್ಥಿಗಳೆಲ್ಲರೂ ಸಿಡಿಸಿ ಸಂಭ್ರಮಪಟ್ಟರು.




