ಸಂಘದ ಅಧ್ಯಕ್ಷರಾಗಿ ತ್ರಿವಿಕ್ರಮ ಹೆಬ್ಬಾರ್,ಉಪಾಧ್ಯಕ್ಷರಾಗಿ ವರದ ಶಂಕರ ದಾಮ್ಲೆ,ಡಾ.ಶಶಿಧರ ಡೋಂಗ್ರೆ, ಕಾರ್ಯದರ್ಶಿಯಾಗಿ ನಾರಾಯಣ ಫಡ್ಕೆ, ಜತೆ ಕಾರ್ಯದರ್ಶಿಯಾಗಿ ರಶ್ಮಿ ಪಟವರ್ಧನ್, ಖಜಾಂಚಿಯಾಗಿ ವಾಸುದೇವ ಗೋಖಲೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋವಿಂದ ದಾಮ್ಲೆ, ಉಷಾ ಎಸ್.ಮೆಹೆಂದಳೆ, ನರಸಿಂಹ ಪಾಳಂದ್ಯೆ, ರವಿಕಲಾ ತಾಮನ್ಕರ್, ಪ್ರಹ್ಲಾದ ಫಡ್ಕೆ, ವೇಣು ಗೋಪಾಲ ಗೋಖಲೆ, ಅಶ್ವಿನಿ ಎ. ಹೆಬ್ಬಾರ್, ಚಂದ್ರಕಾಂತ ಗೋರೆ, ವಿವೇಕ್ ಕೇಳ್ಕರ್ ಹಾಗೂ ಭಾರ್ಗವ ಮರಾಠೆ ಅವರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘವನ್ನು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀರಾಮ ಕೃಷ್ಣ ಸಭಾ ಭವನದಲ್ಲಿ ಹಿರಿಯ ಪುರೋಹಿತ ಸೂಳಬೆಟ್ಟು ಪದ್ಮನಾಭ ಜೋಶಿ ಉದ್ಘಾಟಿಸಿ, ಪದಗ್ರಹಣ ನೆರವೇರಿಸಿದರು.
ಅತಿಥಿಯಾಗಿದ್ದ ಸಾಹಿತಿ ವಿಜಯ ವಿಷ್ಣು ಡೋಂಗ್ರೆ ಮಾತನಾಡಿ, ನಮ್ಮ ಚಿತ್ಪಾವನ ವಿಚಾರ, ಸಂಸ್ಕೃತಿ, ತ್ಯಾಗ, ಶೌರ್ಯಗಳನ್ನು ಸಂಘಟನೆಯ ಮೂಲಕ ಪ್ರಚುರಪಡಿಸಬೇಕು. ಹೊಸ ಚಿಂತನೆಗಳೊಂದಿಗೆ ಚಿಕ್ಕ ಗುಂಪುಗಳು ಬೃಹತ್ ಶಕ್ತಿಯಾಗಿ ಬೆಳೆದು ಸಾಮಾಜಿಕ ಕಳಕಳಿಯ ಕೆಲಸಗಳು ನಡೆಯವಂತಾಗಬೇಕು. ನಮ್ಮ ಹಿರಿಯರ ಪರಂಪರೆಯಲ್ಲಿ ಮುಂದುವರಿದು ಅವರ ಚಿಂತನೆಗಳಿಗೆ ಪೂರಕವಾಗಿ ರಾಷ್ಟ್ರದ ಅಭಿವೃದ್ದಿಯ ಹೆಜ್ಜೆಯಲ್ಲಿ ಸಾಗಬೇಕು ಎಂದರು.
ಹಿರಿಯ ಪತ್ರಕರ್ತ ಶ್ರೀಕರ ಮರಾಠೆ ಮಾತನಾಡಿ ಇಂದು ನಡೆಯುತ್ತಿರುವ ಕಲಬೆರಕೆ ಸಂಸ್ಕೃತಿಯನ್ನು ಮಟ್ಟ ಹಾಕಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ನಡೆಯಬೇಕು. ಪರಂಪರೆಯ ಅರಿವಿನೊಂದಿಗೆ ಸರಳತೆ, ಸಜ್ಜನಿಕೆಯ ಜೀವನ ನಡೆಸಬೇಕು. ಸಂಘಗಳನ್ನು ಕಟ್ಟುವವರಲ್ಲಿ ಸಮಾಜ ಸೇವೆಯ ಧ್ಯೇಯ ಇರಬೇಕು ಎಂದರು. ನಿವೃತ್ತ ಶಿಕ್ಷಕ ಶ್ರೀ ರಾಮ ದಾಮ್ಲೆ, ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್, ಪ್ರಧಾನ ಕಾರ್ಯದರ್ಶಿ ನಾರಾಯಣ ಫಡಕೆ ಮುಂಡಾಜೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಡಾ. ಶಶಿಧರ ಡೊಂಗ್ರೆ ಸ್ವಾಗತಿಸಿದರು. ನ್ಯಾಯವಾದಿ ಶೈಲೇಶ್ ಠೋಸರ್ ಹಾಗೂ ಜೊತೆ ಕಾರ್ಯದರ್ಶಿ ರಶ್ಮಿ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವರದ ಶಂಕರ್ ದಾಮ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ವೇಣು ಗೋಪಾಲ ಗೋಖಲೆ ವಂದಿಸಿದರು.