ಕೊಕ್ಕಡ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಯಾಗ

ಶೇರ್ ಮಾಡಿ

ಕೊಕ್ಕಡ : ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅ.24 ಲೋಕಕಲ್ಯಾಣಾರ್ಥವಾಗಿ ಶ್ರೀ ದೇವರಿಗೆ ಸಿಯಾಳ ಅಭಿಷೇಕ, ಸಾಮೂಹಿಕ ಸಂಜೀವಿನಿ ಮೃತ್ಯುಂಜಯ ಯಾಗ, ಮಧ್ಯಾಹ್ನ ಮಹಾಪೂಜೆ, ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಗಂಟೆ 6 ರಿಂದ ದೀಪಾವಳಿ ಪ್ರಯುಕ್ತ ಬಲಿಂದ್ರ ಪೂಜೆ ಹಾಗೂ ಶ್ರೀ ದೇವರ ಬಲಿ ಹೊರಡುವ ಕಾರ್ಯಕ್ರಮ ನಡೆಯಿತು. ದೇವಳದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು

Leave a Reply

error: Content is protected !!