ಕೊಕ್ಕಡ: ಪಾರ್ಪಿಕಲ್ಲಿನಲ್ಲಿ ಇಮ್ಮಡಿಗೊಂಡ ದೀಪಾವಳಿ ಸಂಭ್ರಮ; ಬೇಡಿಕೆ ಈಡೇರಿದಲ್ಲೇ ಸಾಲು ಹಣತೆ ಹಚ್ಚಿ ದೀಪಾವಳಿ ಆಚರಣೆ

ಶೇರ್ ಮಾಡಿ

ಕೊಕ್ಕಡ :ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್ ನಿವಾಸಿಗಳು ಅ.24ರಂದು ವಿನೂತನ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸಿದರು.
ಕಳೆದ 15 ವರ್ಷಗಳಿಂದ ಪಾರ್ಪಿಕಲ್ ಪರಿಸರದ ನಿವಾಸಿಗಳು ಕಳೆಂಜ ರಸ್ತೆಯ ಅಭಿವೃದ್ಧಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮುತುವರ್ಜಿಯಲ್ಲಿ ಪಾರ್ಪಿಕಲ್ ಎಂಬಲ್ಲಿ ಸೇತುವೆ ಹಾಗೂ ಪಾರ್ಪಿಕಲ್ – ಕಳೆಂಜ ರಸ್ತೆಗೆ ಸಡಕ್ ಯೋಜನೆಯಲ್ಲಿ ಅನುದಾನವನ್ನು ಒದಗಿಸಿ ರಸ್ತೆ ಹಾಗೂ ಸೇತುವೆ ನಿರ್ಮಾಣವಾಯಿತು.

ಈ ನಿಟ್ಟಿನಲ್ಲಿ ದೀಪಾವಳಿಯ ಸಂದರ್ಭ ಪೂರ್ಣಗೊಂಡ ಸೇತುವೆಯ ಎರಡು ಬದಿಗಳಲ್ಲೂ ಸಾಲು ಹಣತೆಗಳನ್ನು ಹಚ್ಚಿ ತಮ್ಮ ಖುಷಿಯನ್ನು ಹಂಚಿಕೊಂಡರು.

ಅಲ್ಲದೆ ಈ ಖುಷಿಗೆ ಕಾರಣರಾದ ಶಾಸಕರಿಗೆ ಈ ಸಂದರ್ಭ ಸ್ಥಳೀಯರೆಲ್ಲರೂ ಅಭಿನಂದನೆ ಸಲ್ಲಿಸಿದರು. ಸ್ಥಳೀಯ ನಿವಾಸಿಗಳು ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Leave a Reply

error: Content is protected !!