ಅರಸಿನಮಕ್ಕಿ : ಇಲ್ಲಿನ ಶಾರದಾ ವಿಲಾಸ – ಶುಭರಾಮ್ ಕಾಂಪ್ಲೆಕ್ಸ್ ಬಳಗದ ಆಶ್ರಯದಲ್ಲಿ 2ನೇ ವರ್ಷದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ ವಿಶಿಷ್ಟವಾಗಿ ಅದ್ದೂರಿಯಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಅರಸಿನಮಕ್ಕಿ ಗ್ರಾ. ಪಂ. ಅಧ್ಯಕ್ಷರಾದ ನವೀನ್ ರೆಖ್ಯ, ಶಿಬಾಜೆ ಗ್ರಾ. ಪಂ. ಅಧ್ಯಕ್ಷ ರತೀಶ್ ಗೌಡ, ಗ್ರಾ. ಪಂ. ಉಪಾಧ್ಯಕ್ಷರಾದ ಶಕುಂತಲಾ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಸುಧೀರ್ ಕುಮಾರ್ ಎಂ. ಎಸ್., ಶಿಶಿಲ ಬಿಜೆಪಿ ಶಕ್ತಿಕೇಂದ್ರ ಪ್ರಮುಖ್ ಸುಧೀನ್, ತಾ. ಪಂ. ಮಾಜಿ ಸದಸ್ಯೆ ಮಂಜುಳಾ ಕಾರಂತ್, ಹೊಸ್ತೋಟ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಮೊದಲಾದವರು ದೀಪ ಬೆಳಗಿ, ದೋಸೆ ಹಾಕಿ ಉದ್ಘಾಟಿಸಿ ಈ ಕಾಂಪ್ಲೆಕ್ಸ್ ನ ಬಳಗದವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಶುಭಹಾರೈಸಿದರು.
ಮನೆಗಳಲ್ಲಿ ಆಚರಿಸುತ್ತಿದ್ದ ದೀಪಾವಳಿಯನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ರವಾನೆಯಾಗುತ್ತದೆ. ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾದರಿ ಎಂದರು.
ಗಣೇಶ್ ಹೊಸ್ತೋಟ ಸ್ವಾಗತಿಸಿದರು. ಮುರಳೀಧರ ಶೆಟ್ಟಿಗಾರ್ ವಂದಿಸಿದರು. ಗಣೇಶ್ ಪಲಸ್ತಡ್ಕ, ಶ್ರೀಕಾಂತ್ ಕಾಂತ್ರೆಲ್, ಧನ್ಯಶ್ರೀ, ಜಯಪ್ರಸಾದ್ ಶೆಟ್ಟಿಗಾರ್, ಸುದರ್ಶನ್, ವಿನೋದ್ ಶೆಟ್ಟಿಗಾರ್, ನವೀನ್ ರೈ, ದಯಾನಂದ್ ಉದ್ಯೇರೆ, ಚಂದ್ರಶೇಖರ್ ಗೌಡ, ಪ್ರೇಮಚಂದ್ರ ಕೆ., ನೀತಾ ಕಲ್ಲಕೋಟೆ, ಚಂದ್ರಾವತಿ ಮೊದಲಾದವರು ಸಹಕರಿಸಿದರು. ರವಿ ದಾಮಲೆ ಮತ್ತು ಹರೀಶ್ ಪಟವರ್ಧನ್ ಬಾಣಸಿಗರಾಗಿ ಸಹಕರಿಸಿದರು.