ನೆಲ್ಯಾಡಿ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಬದ್ರಿಯಾ ಜುಮಾ ಮಸೀದಿಯ ಅಧೀನ ಸಂಸ್ಥೆ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆ ನೆಲ್ಯಾಡಿಯಲ್ಲಿ ಸಡಗರ ಸಂಭ್ರಮದ ಮೀಲಾದುನ್ನಬಿ ಆಚರಣೆ ಮಾಡಲಾಯಿತು. ಬೆಳಗ್ಗೆ ಮಂಖೂಸ್ ಮೌಲಿದ್ ಪಾರಾಯಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಅಲ್ ಬದ್ರಿಯಾ ಸುನ್ನೀ ಮಹಿಳಾ ‌ಶರೀಅತ್ ಕಾಲೇಜು ಪ್ರಾಂಶುಪಾಲರಾದ ಪ್ರೊ.ಶೌಕತ್ ಅಲಿ ಅಮಾನಿ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯು ಬೆಳೆದು ಬಂದ ರೀತಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಮೌಲಾಧಾರಿತವಾದ ಶಿಕ್ಷಣವನ್ನು ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಝಿಂ ಸಾಹೇಬ್ ವಹಿಸಿದರು. ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಸಿ.ಕೆ. ಅಬ್ದುಲ್ ರಹೀಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಎನ್.ಎಸ್.ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಬೈಲ್, ಕಾರ್ಯದರ್ಶಿ ನೌಫಲ್ ಸಾಗರ್, ಸದಸ್ಯರುಗಳಾದ ಉಮ್ಮರ್ ತಾಜ್, ಮುಹಮ್ಮದ್ ಹನೀಫ್, ಇಸ್ಮಾಯಿಲ್ ಎನ್.ಕೆ, ಇಲ್ಯಾಸ್ ಎನ್. ಮುಹಮ್ಮದ್ ಹನೀಫ್ ಕರಾವಳಿ, ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಮುಹಮ್ಮದ್ ಶರೀಫ್ ಸಖಾಫಿ, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೊರಂಕಲ, ಕೋಶಾಧಿಕಾರಿ ರಫೀಕ್ ಅಲಂಪಾಡಿ, ಸದಸ್ಯರಾದ ಶಾಹುಲ್ ಹಮೀದ್ ಸಖಾಫಿ ಉಪಸ್ಥಿತರಿದ್ದರು.

ಬಳಿಕ ಪ್ರಿ-ಸ್ಕೂಲ್ ವಿದ್ಯಾರ್ಥಿಗಳ ಇಶ್ಕೇ ಮದೀನಾ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಿ- ಸ್ಕೂಲ್, ಶರೀಅತ್ ಕಾಲೇಜ್, ಪಿ.ಯು.ಕಾಲೇಜ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆ.ಇ. ಸ್ವಾಗತಿಸಿದರು ವಂದಿಸಿದರು. ಶಿಕ್ಷಕಿಯರಾದ ಫಯಿಝಾ ಮತ್ತು ಹನ್ನತ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!