ಸೌತಡ್ಕ ನೈಮಿಷ ಸ್ಪೈಸಸ್ ಸಂಸ್ಥೆ ವಿಶಿಷ್ಟ ರೀತಿಯಲ್ಲಿ ವಾರ್ಷಿಕೋತ್ಸವ ಹಾಗೂ ದೀಪಾವಳಿ ಆಚರಣೆ

ಶೇರ್ ಮಾಡಿ

ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿರುವ ಶ್ರೀ ರಾಮ ವಿದ್ಯಾ ಸಂಸ್ಥೆಗೆ ವಿದ್ಯಾನಿಧಿಗಾಗಿ 5 ಲಕ್ಷ ರೂಪಾಯಿ ಮೊತ್ತವನ್ನು ಹಾಗೂ ಸೇವಾ ಭಾರತಿ ಕನ್ಯಾಡಿ ವತಿಯಿಂದ ನಡೆಸಲ್ಪಡುವಂತಹ ಶ್ರೀ ಕ್ಷೇತ್ರ ಸೌತಡ್ಕದ ಬಳಿಯ ಸೇವಾಧಾಮಕ್ಕೆ 50 ಸಾವಿರ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡಲಾಯಿತು.

ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ದಲ್ಲಿರುವ ನೈಮಿಷ ಸ್ಪೈಸಸ್ ಸಂಸ್ಥೆಯು ತನ್ನ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿತ್ತು.
ಈ ಸಂದರ್ಭ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೃಷ್ಣ ಭಟ್ ಅಧ್ಯಕ್ಷರು ಮಹಾಗಣಪತಿ ಸೇವಾ ಟ್ರಸ್ಟ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಅಂಕಿತ್ ಸಿಂಗ್, ಮ್ಯಾನೇಜರ್ ಕೆನರಾ ಬ್ಯಾಂಕ್ ಕೊಕ್ಕಡ, ವಿನಾಯಕ ರಾವ್ ಅಧ್ಯಕ್ಷರು ಸೇವಾ ಭಾರತಿ ಕನ್ಯಾಡಿ, ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷರು ಸೇವ ಸಹಕಾರಿ ಬ್ಯಾಂಕ್ ಕೊಕ್ಕಡ, ಎಚ್ ಎಮ್. ಪುಟ್ಟಪ್ಪ ನಿವೃತ್ತ ಮಾಜಿ ಸೈನಿಕರು, ಕೆ ಸಿ. ಚಂದ್ರ ಉದ್ಯಮಿ ಧರ್ಮಸ್ಥಳ ಉಪಸ್ಥಿತರಿದ್ದರು.

ನೈಮಿಷ ಸ್ಪೈಸಸ್ ಸಂಸ್ಥೆಯು ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದು, ಆರಂಭದಿಂದಲೇ ಗಳಿಕೆಯ ಒಂದಂಶವನ್ನು ಸಮಾಜದ ಜನಪರ ಕೆಲಸಗಳಿಗೆ ವಿನಿಯೋಗಿಸುತ್ತ ಒಂದು ಮಾದರಿ ಸಂಸ್ಥೆಯಾಗಿ ಬೆಳೆದಿದೆ.

ಈ ಸಂದರ್ಭ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿರುವ ಶ್ರೀ ರಾಮ ವಿದ್ಯಾ ಸಂಸ್ಥೆಗೆ ವಿದ್ಯಾನಿಧಿಗಾಗಿ 5 ಲಕ್ಷ ರೂಪಾಯಿ ಮೊತ್ತವನ್ನು

ಹಾಗೂ ಸೇವಾ ಭಾರತಿ ಕನ್ಯಾಡಿ ವತಿಯಿಂದ ನಡೆಸಲ್ಪಡುವಂತಹ ಶ್ರೀ ಕ್ಷೇತ್ರ ಸೌತಡ್ಕದ ಬಳಿಯ ಸೇವಾಧಾಮಕ್ಕೆ 50 ಸಾವಿರ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಾಲಕೃಷ್ಣ, ಮಾಲಕರ ಪತ್ನಿ ರಿಂಕ, ಪುತ್ರ ವಿಖ್ಯಾತ್ ಹಾಗೂ ಕುಟುಂಬದವರು, ಸಂಸ್ಥೆಯ ಸಿಬ್ಬಂದಿಗಳು, ಪಟ್ಟೂರು ಶ್ರೀರಾಮ ವಿದ್ಯಾಲಯದ ಸಿಬ್ಬಂದಿ ಹಾಗೂ ಟ್ರಸ್ಟಿಗಳು, ಸೇವಾ ಭಾರತೀಯ ಸಿಬ್ಬಂದಿಗಳು, ವಿಶೇಷವಾಗಿ ಸೇವಾಧಾಮದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನು ಮೂಳೆ ಮುರಿತಕ್ಕೊಳಗಾದ ವಿಕಲಚೇತನರು, ಸಂಸ್ಥೆ ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಮಾಲಕ ಬಾಲಕೃಷ್ಣ ಸ್ವಾಗತಿಸಿ, ಸೇವಾ ಭಾರತಿಯ ಮ್ಯಾನೇಜರ್ ಚರಣ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಸುಡುಮದ್ದು ಪ್ರದರ್ಶನ ಹಾಗೂ ಉಪಹಾರದ ವ್ಯವಸ್ಥೆಯನ್ನು ನೀಡಲಾಯಿತು.

Leave a Reply

error: Content is protected !!