ನೇಸರ ಡಿ11: ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಪರಿಸರದ ಅರಣ್ಯ ಪ್ರದೇಶದ ಅಂಚಿನಲ್ಲಿ ಕಾಡಾನೆಯೊಂದು ಬೀಡು ಬಿಟ್ಟಿದ್ದು, ತೋಟದೊಳಗೆ ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.
ಲಾವತ್ತಡ್ಕ ನಿವಾಸಿ ವರ್ಗೀಸ್ ತೋಮಸ್ ಎಂಬವರ ತೋಟದೊಳಗೆ ನುಗ್ಗಿರುವ ಆನೆ ತೆಂಗು,ಬಾಳೆ ಗಿಡಗಳನ್ನು ಕೆಡವಿ ಹಾಕಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.
ಈ ಭಾಗದಲ್ಲಿ ಆನೆ ದಾಳಿ ನಡೆಯುತ್ತಲೇ ಇರುತ್ತದೆ, ಇದರಿಂದರಿಂದಾಗಿ ಕೃಪಿಕರಿಗೆ ತುಂಬಾ ತೊಂದರೆಯಾಗಿದೆ.
ಸುಬ್ರಹ್ಮಣ್ಯದಿಂದ ಕೋಣಾಜೆ-ಕಲ್ಲಗುಡ್ಡೆ-ಅಡಂಜೆ ದೇವಾಸ್ಧಾನ ಬಳಿ ನದಿದಾಟಿ ಕಳಂಜಾಲುಗೆ ಬಂದು ಅಲ್ಲಿಂದ ರಾಷ್ಟೀಯ ಹೆದ್ದಾರಿಯನ್ನು ದಾಟಿ ಪರ್ಕಳ ಕಾಡಿನ ಮೂಲಕ ಕಳಂಜ-ಕಾರ್ಯತ್ತಡ್ಕವಾಗಿ ಧರ್ಮಸ್ಥಳಕ್ಕೆ ಹಿಂದಿನಿಂದಲೂ ಸಂಚರಿಸುತ್ತಿತ್ತು. ಆದರೆ ಈಗ ರಸ್ತೆ ಅಗಲೀಕರಣದಿಂದಾಗಿ ಮಣ್ಣಿನ ರಾಶಿ ಅಲ್ಲಲ್ಲಿ ಇರುದರಿಂದ ಆನೆ ಹೆದರಿ ಹಿಂತಿರುಗಿ ಬರುವಾಗ ತೋಟಕ್ಕೆ ನುಗ್ಗುತ್ತಿವೆ. ಅನೇಕ ಬಾರಿ ಅನೆ ಕಾರಿಡಾರು ರಚನೆಯ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ ಎಂಬುದು ಕೃಷಿಕರ ಅಳಲು. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಕೃಷಿಕರಿಗೆ ಹಾಗೂ ಕೃಷಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳ ಬೇಕಾಗಿದೆ.
ಜಾಹೀರಾತು