
ಉದನೆ: ರಾಷ್ಟ್ರೀಯ ಹೆದ್ದಾರಿ 75 ರ ಉದನೆ ಎಂಬಲ್ಲಿ ಹೋಟೆಲೊಂದರಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಹೊಟೇಲಿನ ಹಿಂಬದಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕೌಕ್ರಾಡಿ ಗ್ರಾಮದ ಹೊಸಮಜಲಿನ ನಿವಾಸಿ ಸಂಜೀವ ಪೂಜಾರಿ (ವ.48) ಎಂಬವರನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣೆಯ ಎಸ್ ಐ ರಾಜೇಶ್ ಕೆ. ವಿ ಹಾಗೂ ನೆಲ್ಯಾಡಿಯ ಹೊರಠಾಣೆಯ ಸಿಬ್ಬಂದಿಗಳಾದ ಬಾಲಕೃಷ್ಣ, ಕುಶಾಲಪ್ಪ, ನಾಗರಾಜ ಪಾಲ್ಗೊಂಡಿದ್ದರು.




