ಕಡಬ ಮೆಸ್ಕಾಂ ಉಪ ವಿಭಾಗದಲ್ಲಿ ಕೋಟಿಕಂಠ ಗಾಯನ

ಶೇರ್ ಮಾಡಿ

ಕಡಬ: 67ನೇ ಕನ್ನಡ ರಾಜ್ಯೋತ್ಸವ ವನ್ನು ಮೆಸ್ಕಾಂ ಕಡಬ ಉಪ ವಿಭಾಗದಲ್ಲಿ ಸರ್ಕಾರದ ಅನುಮತಿಯಂತೆ ಕೋಟಿಕಂಠ ಗಾಯನವನ್ನು ಅಯೋಗಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜೀಕುಮಾರ್ ಅಧ್ಯಕ್ಷತೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂದಿತು.

ಕಡಬ ಉಪವಿಭಾಗದ ಸಹಾಯಕ ಲೆಕ್ಕಧಿಕಾರಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಕವಿಗಳು ರಚಿಸಿದ 6 ಹಾಡುಗಳನ್ನು ಎಲ್ಲರೂ ಸೇರಿ ಹಾಡಲಾಯಿತು.
ಕಾರ್ಯಕ್ರಮ ದಲ್ಲಿ ಕಡಬ ಶಾಖೆಯ ಶಾಖಾಧಿಕಾರಿ ಸತ್ಯನಾರಾಯಣ, ನೆಲ್ಯಾಡಿ ಶಾಖಾಧಿಕಾರಿ ರಮೇಶ್.ಬಿ, ಅಲಂಕಾರು ಶಾಖಾಧಿಕಾರಿ ಪ್ರೇಮ್ ಕುಮಾರ. ಎಸ್ ಬಿಳಿನೆಲೆ ಶಾಖಾಧಿಕಾರಿ ಶರಣ್ ಗೌಡ ಹಾಗೂ ಕಡಬ ಉಪವಿಭಾಗದ ಎಲ್ಲಾ ನೌಕರರು, ಮತ್ತು ಕೆಲವು ವಿದ್ಯುತ್ ಗುತ್ತಿಗೆಧಾರರು ಸಹಕರಿಸಿದರು.

Leave a Reply

error: Content is protected !!