ನೆಲ್ಯಾಡಿ : ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣ ಅಭಿಯಾನ ರಥವು ಅ. 30 ರಂದು ಕಡಬ ತಾಲೂಕಿನ ನೆಲ್ಯಾಡಿ ಸುತ್ತಮುತ್ತ ವಿವಿಧ ಗ್ರಾ.ಪಂ. ಗಳಿಗೆ ಭೇಟಿ ನೀಡಿ ಮೃತ್ತಿಕೆಯನ್ನು ಸಂಗ್ರಹಿಸಿತು.
ರಥವು ಪೂರ್ವಾಹ್ನ 10 ಘಂಟೆಗೆ ನೆಲ್ಯಾಡಿಗೆ ಆಗಮಿಸಿದ್ದು, ಶಿರಾಡಿ, ಕೌಕ್ರಾಡಿ ಮತ್ತು ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಯವರೂ ಜತೆ ಸೇರಿ ಮೃತ್ತಿಕೆ ಅರ್ಪಿಸಿದರು. ಬಳಿಕ ರಥವು ಗೋಳಿತ್ತೊಟ್ಟು ಮೂಲಕ ಕೊಯಿಲ, ರಾಮಕುಂಜ, ಆಲಂಗಾರು, ಪೆರಾಬೆ, ಕಾಣಿಯೂರು ಸಾಗಿ ಕಡಬವನ್ನು ತಲುಪಿದೆ. ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಸಂಗ್ರಹ ಮಾಡಿಟ್ಟ ಮೃತ್ತಿಕೆಯನ್ನು ರಥಕ್ಕೆ ಹಾಕಲಾಯಿತು.
ಈ ಸಂದರ್ಭ ಕಡಬ ತಹಶೀಲ್ದಾರ್ ರಮೇಶ್ ಬಾಬು, ನೋಡಲ್ ಅಧಿಕಾರಿ ಕಡಬ ಮೆಸ್ಕಾಂ ಇಲಾಖೆಯ ಸಹಾಯಕ ನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡರು.
ಈ ಸಂದರ್ಭ ಕಡಬ ತಹಶೀಲ್ದಾರ್ ರಮೇಶ್ ಬಾಬು, ನೋಡಲ್ ಅಧಿಕಾರಿ ಕಡಬ ಮೆಸ್ಕಾಂ ಇಲಾಖೆಯ ಸಹಾಯಕ ನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡರು.