ವಿಟ್ಲ: ಬಸ್- ರಿಕ್ಷಾ ಡಿಕ್ಕಿ; ಪ್ರಯಾಣಿಕರು ಪಾರು

ಶೇರ್ ಮಾಡಿ

ವಿಟ್ಲ: ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ನಡೆದಿದೆ.
ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಆಟೋ ರಿಕ್ಷಾ ಮತ್ತು ಬಸ್ ತೆರಳುತ್ತಿದ್ದ ವೇಳೆ ಬಸ್ ರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಿಂದ ಆಟೋ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ.

Leave a Reply

error: Content is protected !!