ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಶೇರ್ ಮಾಡಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯು ನಡೆಯಿತು.
ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಹಚ್ಚೇವು ಕನ್ನಡದ ದೀಪ ಎಂಬ ಗೀತೆಗಳ ಗಾಯನವನ್ನು ಮಾಡಿದರು. ನಂತರ ಕನ್ನಡ ರಾಜ್ಯೋತ್ಸವದ ಸಂದೇಶವನ್ನು ನೀಡಿದ ಕಾಲೇಜಿನ ಕನ್ನಡ ವಿಭಾಗದ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯಸ್ಥರಾದ ತಿಲಕಾಕ್ಷರವರು ಮಾತನಾಡುತ್ತಾ “ಕನ್ನಡ ರಾಜ್ಯೋತ್ಸವವನ್ನು ಈ ದಿನ ನಮ್ಮ ರಾಜ್ಯದ ನಿರ್ಮಾಣವಾದುದರ ಸಂಕೇತವಾಗಿ ಆಚರಿಸಲಾಗುತ್ತದೆ. ಕನ್ನಡ ಮಾತನಾಡುವ ಪ್ರದೇಶವನ್ನು ವಿಲೀನಗೊಳಿಸಿ ಒಂದು ರಾಜ್ಯ ಅಂತ ಮಾಡಿದ ಈ ದಿನವನ್ನು ನಾವು ನಾಡ ಹಬ್ಬವಾಗಿ, ಯಾವುದೇ ಜಾತಿ,ಮತ, ಪಂಥಗಳ ಬೇಧವಿಲ್ಲದೆ ಆಚರಿಸುತ್ತೇವೆ. ಇಂಥಹ ಮಹತ್ವಪೂರ್ಣ ದಿನವಾದ ಇಂದು ಕನ್ನಡ ಬಾಷೆಯನ್ನು ಬಳಸಿ ಬೆಳೆಸುವ ಸಂಕಲ್ಪವನ್ನು ನಾವು ಮಾಡಬೇಕು” ಎಂದು ಕರೆ ಕೊಟ್ಟರು.

ನಂತರ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ ಶುಭಹಾರೈಸಿದರು. ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕನ್ನಡ ಮಾತೆ ಭುವನೇಶ್ವರಿದೇವಿಯ ಚಿತ್ರಕ್ಕೆ ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಾಯಕ ಗಗನ್‌ದೀಪ್,ಪ್ರಾಂಶುಪಾಲರಾದ ಚಂದ್ರಶೇಖರ ಕೆ, ಉಪನ್ಯಾಸಕ-ಉಪನ್ಯಾಸಕೇತರ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!