
ಮೊಗ್ರು: ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಮೊಗ್ರು – ಕಾಯರ್ಪಾಡಿ ವಿಭಾಗ, ಜನ ಜಾಗೃತಿ ಗ್ರಾಮ ಸಮಿತಿ ಮೊಗ್ರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಸಮಿತಿ ಇದರ ವತಿಯಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಳ ಅಭಿಷೇಕ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿ ಸದಸ್ಯರು, ಒಕ್ಕೂಟ ಅಧ್ಯಕ್ಷ ರಾದ ಸಂಕಪ್ಪ ಗೌಡ, ವಲಯ ಮೇಲ್ವಿಚಾರಕರಾದ ಶ್ರೀ ಮತಿ ಪ್ರೇಮ, ಜನ ಜಾಗೃತಿ ತಾಲೂಕು ಸಮಿತಿ ಸದಸ್ಯರಾದ ಜಯಪ್ರಕಾಶ್ ಕಡಮಾಜೆ, ಗ್ರಾಮ ಸಮಿತಿ ಅಧ್ಯಕ್ಷರಾದ ಈಶ್ವರ ಶೆಟ್ಟಿ, ಸೇವಾಪ್ರತಿನಿಧಿಗಳಾದ ಶ್ರೀಮತಿ ಸರೋಜ ಮತ್ತು ಶ್ರೀಮತಿ ಚಂದ್ರಕಲಾ ಇವರು ಉಪಸ್ಥಿತರಿದ್ದರು.





