
ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕಕ್ಕೆ ವಲಯಾಧ್ಯಕ್ಷ ಜೇಸಿ ಸೇನೆಟರ್ ರೋಯನ್ ಉದಯ ಕ್ರಾಸ್ತಾ ಅಧಿಕೃತ ಭೇಟಿ “ಹೆಜ್ಜೆ” ಕಾರ್ಯಕ್ರಮ ನಡೆಯಿತು. ಘಟಕದ 2022ನೇ ಸಾಲಿನ ಶಾಶ್ವತ ಯೋಜನೆಯ ಅಂಗವಾಗಿ ರೋಟರಿ ಕ್ಲಬ್ ಉಪ್ಪಿನಂಗಡಿ ಸಹಯೋಗದೊಂದಿಗೆ 1836ರಲ್ಲಿ ಸ್ಥಾಪನೆಗೊಂಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಗೆ ವಲಯಾಧ್ಯಕ್ಷರು ನೀರಿನ ಟ್ಯಾಂಕ್ ನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಚಂದ್ರ ಶಾಂತಿಗೆ ಹಸ್ತಾಂತರ ಮಾಡಲಾಯಿತು.

ಸಭಾ ಕಾರ್ಯಕ್ರಮ ರೋಟರಿ ಭವನ ಉಪ್ಪಿನಂಗಡಿಯಲ್ಲಿ ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆಯಲ್ಲಿ ನಡೆಯಿತು. ವಲಯಾಧ್ಯಕ್ಷರಾದ ಜೇಸಿ ಸೆನೆಟರ್ ರೋಯನ್ ಉದಯ ಕ್ರಾಸ್ತ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಲಯ ಉಪಾಧ್ಯಕ್ಷ ಜೇಸಿ ದೀಪಕ್ ಗಂಗೂಲಿ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಮೋಹನ್ ನಕ್ರೆ, ಸಮಾಜ ಸೇವಾ ರತ್ನ ಪ್ರಶಸ್ತಿ ಪಡೆದ ಜೇಸಿ ಶಶಿಧರ್ ನೆಕ್ಕಿಲಾಡಿ ಗೆ ಗೌರವಾರ್ಪಣೆ ನಡೆಯಿತು. ನೀರಿನ ಟ್ಯಾಂಕ್ ನೀಡಲು ಸಹಕರಿಸಿದ ರೋಟರಿ ಕ್ಲಬ್ ಅಧ್ಯಕ್ಷರಾದ ರೋ.ಜಗದೀಶ್ ನಾಯಕ್, ಪೂರ್ವಾಧ್ಯಕ್ಷರಾದ ಜೇಸಿ ಹರೀಶ್ ನಟ್ಟಿಬೈಲು ಗೌರವಿಸಲಾಯಿತು. 2023ನೇ ಸಾಲಿನ ಘಟಕದ ಅಧ್ಯಕ್ಷ ಜೇಸಿ ಶೇಖರ್ ಗೌಡತ್ತಿಗೆ ಮತ್ತು ಕಾರ್ಯದರ್ಶಿ ಜೇಸಿ ಸುರೇಶ್ ಆಯ್ಕೆಗೊಂಡಿರುದನ್ನು ಪ್ರಕಟಿಸಿ ಲಾಯಿತು. ನವೆಂಬರ್ ತಿಂಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟ “ಸ್ಪಂದನ ಟ್ರೋಫಿ 2022” ಪ್ರಚಾರ ಪತ್ರ ಬಿಡುಗಡೆ ಮಾಡಲಾಯಿತು. ಘಟಕದ ವರದಿಯನ್ನು ಕಾರ್ಯದರ್ಶಿ ಜೇಸಿ ಲವೀನಾ ಪಿಂಟೊ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಜೇಸಿ ಘಟಕಾಧ್ಯಕ್ಷರಾದ ಜೇಸಿ ಶ್ರೀಮತಿ ಅನೀಶಾ ಗಂಗೂಲಿ, ಪೂರ್ವಾಧ್ಯಕ್ಷರಾದ ಜೇಸಿ ರಾಜಾರಾಂ, ಜೇಸಿ ಗೋವಿಂದ ಪ್ರಸಾದ್ ಕಜೆ, ಜೇಸಿ ವಿಜಯ್ ಕುಮಾರ್ ಕಲ್ಲಳಿಕೆ, ಜೇಸಿ ಆನಂದ ರಾಮಕುಂಜ, ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ಜಯಪ್ರಕಾಶ್ ಶೆಟ್ಟಿ, ಜೇಸಿ ಮೋನಪ್ಪ ಪಮ್ಮನಮಜಲು, ಜೇಸಿ ರಮ್ಯಾ ರಾಜಾರಾಂ, ಜೇಸಿ ಪ್ರಮೀಳಾ ಮಹೇಶ್, ಜೇಸಿ ಸುರೇಶ್, ಜೇಸಿ ಕುಶಾಲಪ್ಪ, ಜೇಸಿ ಮಹೇಶ್, ಜೇಸಿ ಪುನೀತ್, ಜೇಸಿ ವಿಶ್ವನಾಥ್ ಕುಲಾಲ್ ಕರಾಯ, ಜೇಸಿ ದಿವಾಕರ ಶಾಂತಿನಗರ ಉಪಸ್ಥಿತರಿದ್ದರು. ಛಾಯಾಗ್ರಹಣದಲ್ಲಿ ಜೇಸಿ ಚಂದ್ರಶೇಖರ ಮತ್ತು ಭೋಜನ ವ್ಯವಸ್ಥೆಗೆ ಜೇಸಿ ಶ್ರೀಮತಿ ಲವೀನಾ ಪಿಂಟೊ ಸಹಕರಿಸಿದರು.




