ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ

ಶೇರ್ ಮಾಡಿ

ಪುತ್ತೂರು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯು ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜ ದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಲಿಷ್ಕಾ 7ನೇ ತರಗತಿ (ದಿನೇಶ್ ನಾಯಕ್ ಮತ್ತು ಸ್ಮಿತಾ ಶ್ರೀ ದಂಪತಿ ಪುತ್ರಿ) ಚಿತ್ರಕಲೆಯಲ್ಲಿ ಪ್ರಥಮ, ನಾಗಭೂಷಣ ಕಿಣಿ 6ನೇ ತರಗತಿ (ನಾಗರಾಜ ಕಿಣಿ ಮತ್ತು ನಮ್ರತಾ ಕಿಣಿ ದಂಪತಿ ಪುತ್ರ), ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, ಸುಪ್ರಜಾ ರಾವ್ 7ನೇ ತರಗತಿ (ಡಾ.ಪ್ರಶಾಂತ್ ರಾವ್ ಮತ್ತು ಸುಮನ ಕೆ ದಂಪತಿ ಪುತ್ರಿ) ಲಘು ಸಂಗೀತ ಪ್ರಥಮ, ಅನನ್ಯ ನಾವಡ 7ನೇ ತರಗತಿ (ರಾಮಕೃಷ್ಣ ನಾವಡ ಮತ್ತು ಪೂರ್ಣಿಮಾ ದಂಪತಿ ಪುತ್ರಿ) ಅಭಿನಯ ಗೀತೆಯಲ್ಲಿ ತೃತೀಯ, ಸಾನ್ವಿ ಎಸ್ 6ನೇ ತರಗತಿ(ಸಂತೋಷ್ ಕುಮಾರ್ ಮತ್ತು ಸೌಮ್ಯ ದಂಪತಿ ಪುತ್ರಿ) ಕನ್ನಡ ಭಾಷಣ ತೃತೀಯ, ಸಾನ್ವಿ ಚನಿಲ 7ನೇ ತರಗತಿ (ರಘುರಾಮ ಚಂದ್ರ ಚನಿಲ ಮತ್ತು ಸಂಧ್ಯಾ ದಂಪತಿ ಪುತ್ರಿ) ಇಂಗ್ಲಿಷ್ ಕಂಠಪಾಠ ತೃತೀಯ, ಶ್ರೀರಂಜಿನಿ 7ನೇ ತರಗತಿ (ರಾಮಕೃಷ್ಣ ಭಟ್ ಮತ್ತು ಗೀತಾ ಸರಸ್ವತಿ ದಂಪತಿ ಪುತ್ರಿ) ಛದ್ಮವೇಷದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು‌ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಅಂತೆಯೇ ಕಿರಿಯರ ವಿಭಾಗದಲ್ಲಿ ಋತ್ವಿಜ್ ಆರ್ (ರತ್ನಾಕರ ಪ್ರಭು ಮತ್ತು ಸವಿತಾ ಕೆ ದಂಪತಿ ಪುತ್ರ) 4ನೇ ತರಗತಿ ಇಂಗ್ಲಿಷ್ ಕಂಠಪಾಠ ಪ್ರಥಮ, ಅನಘ ಭಟ್(ಹರಿಹರ ಜಿ ಭಟ್ ಮತ್ತು ಮಂಜುಳಾ ಭಟ್ ದಂಪತಿ ಪುತ್ರಿ) 4ನೇ ತರಗತಿ ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!