ಕಾಂಚನ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗಮಕ ವಾಚನ ಕಾರ್ಯಕ್ರಮ

ಶೇರ್ ಮಾಡಿ

ಕಾಂಚನ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಳಪಟ್ಟ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢ ಶಾಲೆ ಕಾಂಚನ ಇಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಗಮಕವಾಚನದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನದಿಂದ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಇವರು ಮಾತನಾಡುತ್ತಾ ಎಲ್ಲ ಭಾಷೆಗಳ ಅರಿವನ್ನು ಹೊಂದುವ ಜೊತೆ ಕನ್ನಡ ವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮಗೆಲ್ಲರಿಗೂ ಇದೆ ಎನ್ನುವುದನ್ನು ತೀಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀಮತಿ ಗೀತಾ ಚಂದ್ರಶೇಖರ್ ತಾಳ್ತಜೆ ಇವರು ಕರ್ನಾಟಕ ಹೆಸರಿನ ಹಿನ್ನಲೆ ಹಾಗೂ ಕನ್ನಡ ವನ್ನು ಮಾತನಾಡುವ ಅನಿವಾರ್ಯತೆಯನ್ನು ಹೇಳಿದರು. ಕನ್ನಡ ಶಿಕ್ಷಕಿಯಾದ ಶ್ರೀಮತಿ ಮಂಜುಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ಕೃಷ್ಣ ಪ್ರಸಾದ ಅಂಬಟೆಮಾರು ಹಾಗೂ ಶಿಕ್ಷಕ ರಕ್ಷಕ ಸಃಘದ ಅಧ್ಯಕ್ಷ ರಾದ ವೇಣುಗೋಪಾಲ ನಾಯಕ್ ಕುಳ್ಳಜೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಕು.ದಿವ್ಯಾ, ಕು.ನೇಹಾ, ಕು.ಶ್ರದ್ಧಾ ಇವರು ಭಾಷಣ ವನ್ನು ಮಾಡಿದರು. ಕುಮಾರಿ ಲೀಕ್ಷಿತ ಮತ್ತು ನಿಕ್ಷಿತಾ ಇವರು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಸಾಹಿತ್ಯಾಭಿರುಚಿಯನ್ನು ಮೂಡಿಸುವ ಸಲುವಾಗಿ ಗಮಕವಾಚನದಲ್ಲಿ ಪ್ರಸಿದ್ಧಿ ಹೊಂದಿರುವ ಧರ್ಮಸ್ಥಳದ ಜಯರಾಮ ಕುದ್ರೆತ್ತಾಯ ಮತ್ತು ಗಮಕ ಪ್ರವಚನಕಾರರಾದಶ್ರೀ ಸುರೇಶ್ ಕುದ್ರೆಂತ್ತಾಯ ರವರ ನೇತೃತ್ವದಲ್ಲಿ ಗಮಕ ವಾಚನ ಪ್ರವಚನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಗಳನ್ನು ಮುಖ್ಯೋಪಾಧ್ಯಾಯರು ಶಾಲು ಹೊದೆಸಿ ಸನ್ಮಾನಿಸಿದರು.

Leave a Reply

error: Content is protected !!