ಬಂಟ್ವಾಳ : ಬಂಟ್ವಾಳ ಜೇಸಿಐ ವತಿಯಿಂದ ಬಂಟ್ವಾಳ ತಾಲೂಕಿನ ವಿವಿಧ ಕಾರ್ಯ ಕ್ಷೇತ್ರದಕ್ಷೇತ್ರದಲ್ಲಿ ಸದ್ದಿಲ್ಲದೆ ದುಡಿದ 116 ಮಂದಿಯನ್ನು ಗುರುತಿಸಿ ಗೌರವಿಸಲಾಯಿತು.
B.C. ರೋಡಿನ ಸ್ಪರ್ಶ ಸಭಾಭವನದಲ್ಲಿ ಜೇಸಿಐ ಬಂಟ್ವಾಳದ ವತಿಯಿಂದ ಭಾವಸಿಂಧು ಮೌನ ಸಾಧಕರಿಗಾಗಿ ಎಂಬ ಕಾರ್ಯಕ್ರಮ ವನ್ನು ಆಯೋಜಿಸಿ ಅಂಗನವಾಡಿ ಹೆಲ್ಪರ್, ಬಿಸಿ ಊಟದ ಕಾರ್ಯಕರ್ತರು, ಮಾಜಿ ಸೈನಿಕರು, ಪೌರಕಾರ್ಮಿಕರು, ರಕ್ತದಾನಿಗಳು, ಗೃಹರಕ್ಷಕ ದಳದವರು, ಪವರ್ ಮೆನ್ ಗಳು, ಅಗ್ನಿ ಶಾಮಕ ಸಿಬ್ಬಂದಿಗಳು, ಸಮಾಜ ಸೇವಕರು, ಅಂಚೆ ಪೇದೆಗಳು ಮುಂತಾದವರನ್ನು ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅಥಿತಿಗಳಾಗಿ ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು,
ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ರಮಾನಾಥ ರೈ, ಭರತ್ ಕುಮಾರ್ ಶೆಟ್ಟಿ ಬೆಂಗಳೂರು, ರಾಜಶೇಖರ ರೈ ಕಳ್ಳಿಗೆ,ಸದಾಶಿವ ಡಿ ತುಂಬೆ, ಜೇಸಿಐ ವಲಯ 15 ರ ಕಾರ್ಯದರ್ಶಿ ಜೇಸಿಐ ಸೌಮ್ಯ ರಾಕೇಶ್, ವಲಯ ಉಪಾಧ್ಯಕ್ಷರಾದ ದೀಪಕ್ ಗಂಗೂಲಿ, ವಲಯಾಧಿಕಾರಿ ರಶ್ಮಿ ಶೆಟ್ಟಿ ಉಪಸ್ಥಿತರಿದ್ದು, ಮಹಿಳಾಜೇಸಿ ಸಂಯೋಜಕರಾದ ಜೇಸಿ ವಿದ್ಯಾ ಉಮೇಶ್, ಯುವ ಜೇಸಿ ಅಧ್ಯಕ್ಷ ಜಯರಾಜ್ ವೇದಿಕೆಯಲ್ಲಿದ್ದರು.
ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ ರೋಶನ್ ರೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷ ಜೇಸಿ ಉಮೇಶ್ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರ್ದೇಶಕ ಹಾಗೂ ವಲಯ ಸಂಯೋಜಕ ಜೇಸಿ ಸಂತೋಷ್ ಜೈನ್ ಧನ್ಯವಾದ ಸಮರ್ಪಿಸಿದರು.
ಕಾರ್ಯದರ್ಶಿ ಜೇಸಿ ರವೀನಾ ಕುಲಾಲ್, ಜೇಸಿಐ ಬಂಟ್ವಾಳದ ಪೂರ್ವಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಜೇಸಿಗಳು, ಯುವ ಜೇಸಿಗಳು ಉಪಸ್ಥಿತರಿದ್ದರು.