ವಾಟ್ಸ್‌ಆ್ಯಪ್ ಗ್ರಾಹಕರಿಗೆ ಹೊಸ ವೈಶಿಷ್ಯಗಳನ್ನು ಮಾರ್ಕ್ ಜುಕರ್‌ಬರ್ಗ್ ಒಡೆತನದ ಪರಿಚಯಿಸಿದೆ.
ಒಂದು ಗುಂಪಿನಲ್ಲಿ ಗರಿಷ್ಠ 1024 ಬಳಕೆದಾರರು ಇರಬಹುದಾಗಿದೆ. ಈ ಮೂಲಕ 1024 ಜನರನ್ನು ಒಳಗೊಂಡ ಸಮುದಾಯ ವಾಟ್ಸ್‌ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಬಹುದಾಗಿದೆ. ಜತೆಗೆ ಒಂದು ಗುಂಪಿನಲ್ಲಿ ಏಕಕಾಲಕ್ಕೆ 32 ಜನರು ವಿಡಿಯೊ ಕಾಲಿಂಗ್ ಮಾಡಬಹುದಾಗಿದೆ ಇದರ ಜತೆಗೆ ಎಮೊಜಿ ರಿಯಾಕ್ಷನ್, ದೊಡ್ಡ ಫೈಲ್ ಶೇರ್ ಮಾಡುವುದು ಮತ್ತು ಸಂದೇಶ ಅಥವಾ ಪೋಟೋ, ವಿಡಿಯೊ ಅನ್ನು ಗ್ರೂಪ್ ಅಡ್ಮಿನ್ ಡಿಲೀಟ್ ಮಾಡಬಹುದಾದ ಸೌಲಭ್ಯ ಮುಂದುವರಿಯಲಿದೆ.
ಈ ಸೌಲಭ್ಯ ಪಡೆಯಲು ವಾಟ್ಸ್‌ಅಪ್ ಸಾಫ್ಟ್ವೇರ್ ಅಪಡೇಟ್ ಮಾಡಿಕೊಳ್ಳಬೇಕಾಗುತ್ತದೆ. ವಾಟ್ಸ್‌ಅಪ್ ಗ್ರೂಪ್‌ಗಳನ್ನು ಹೆಚ್ಚು ಉಪಯುಕ್ತಗೊಳಿಸುವ ನಿಟ್ಟಿನಲ್ಲಿ 15 ದೇಶಗಳ 50ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿವೆ.