ಡಿ.18 ನೆಲ್ಯಾಡಿ ಯುನೈಟೆಡ್ ಕ್ರಿಸ್ಮಸ್ 2022ರ ಆಚರಣೆ; ಅಧ್ಯಕ್ಷರಾಗಿ ಫಾ.ಸಿಬಿ ತೋಮಸ್ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಯುನೈಟೆಡ್ ಕ್ರಿಸ್ಮಸ್ 2022ರ ಆಚರಣೆಯ ಪೂರ್ವಭಾವಿ ಸಭೆಯನ್ನು ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚಿನಲ್ಲಿ ನಡೆಯಿತು.

ಫಾ.ಸಿಬಿ ತೋಮಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯುನೈಟೆಡ್ ಕ್ರಿಸ್ಮಸ್ ಆಚರಣೆಯು ಡಿಸೆಂಬರ್ 18ರ ಆದಿತ್ಯವಾರ ನಡೆಸುವುದೆಂದು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಫಾ.ಸಿಬಿ ತೋಮಸ್, ಉಪಾಧ್ಯಕ್ಷರಾಗಿ ಫಾ.ನಿತಿನ್, ಕಾರ್ಯದರ್ಶಿಯಾಗಿ ಮನೋಜ್ ವರ್ಗೀಸ್, ಸಂಚಾಲಕರಾಗಿ ಫಾ.ತೋಮಸ್ ಬಿಜಿಲಿ, ಕೋಶಾಧಿಕಾರಿಯಾಗಿ ಜಿನೋಯ್ ಎ ಜಾರ್ಜ್ ರನ್ನು ಆಯ್ಕೆ ಮಾಡಲಾಯಿತು.

Leave a Reply

error: Content is protected !!