ಕೊಕ್ಕಡ ಸಾರ್ವಜನಿಕ ಶೌಚಾಲಯಕ್ಕೆ ಬಾಗಿಲು ಹಾಕಿ…!! ಇಲ್ಲವಾದರೆ ನಿರ್ವಹಿಸಲು ಸರಿಯಾದ ವ್ಯವಸ್ಥೆ ಮಾಡಿ ಸಾರ್ವಜನಿಕರ ಆಗ್ರಹ…

ಶೇರ್ ಮಾಡಿ

ನೇಸರ ಡಿ 12: ಬೆಳ್ತಂಗಡಿ ತಾಲೂಕಿನ 27 ಗ್ರಾಮಗಳನ್ನು ಒಳಗೊಂಡ ಕೊಕ್ಕಡ ಹೋಬಳಿಯಾಗಿದೆ. ಈ ಗ್ರಾಮದ ಜನರಿಗೆ ನಾಡಕಛೇರಿ ಹಾಗೂ ನೆಮ್ಮದಿ ಕೇಂದ್ರದ ಕೆಲಸಗಳಿಗೆ ಕೊಕ್ಕಡಕ್ಕೆ ಬರಬೇಕಾಗುತ್ತದೆ.

ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿನ ಅನುದಾನದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಇದೀಗ ಶೌಚಾಲಯದ ಮುಂದೆ ಮೀನು ಮಾರುಕಟ್ಟೆಯನ್ನು ನಿರ್ಮಿಸಿದ್ದರಿಂದ ಶೌಚಾಲಯವೂ ಸಾರ್ವಜನಿಕರಿಗೆ ಉಪಯೋಗ ಇಲ್ಲದಂತಾಗಿದೆ. ಅಲ್ಲದೇ ಸಾರ್ವಜನಿಕ ಶೌಚಾಲಯದ ಸರಿಯಾದ ಯಾವುದೇ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿದೆ, ಆದರೆ ಇದಕ್ಕೆ ಸಂಬಂಧಪಟ್ಟವರು ಗಮನ ವಹಿಸದೇ ಮೌನವಾಗಿದ್ದಾರೆ. ಇತ್ತ ಮದ್ಯವ್ಯಸನಿಗಳಿಗೆ ಮಾತ್ರ ಇದೊಂದು ಆಶಯ ತಾಣವಾಗಿದೆ. ಶೌಚಾಲಯದ ಒಳಗಡೆ ಹೋಗಿ ಮದ್ಯಪಾನ ಮಾಡುತ್ತಾರೆ ಅದಕ್ಕೆ ಅಲ್ಲಿರುವ ಮಧ್ಯದ ಬಾಟಲಿಗಳು ಸಾಕ್ಷಿಯಾಗಿದೆ.

ಸಾರ್ವಜನಿಕ ಶೌಚಾಲಯ ಸಾರ್ವಜನಿಕರಿಗೆ ಮುಕ್ತಗೊಳಿಸಿ…!!
ಈ ಶೌಚಾಲಯ ಸಾರ್ವಜನಿಕರ ಪ್ರಯೋಜನಕ್ಕೆ ಸಿಗುತ್ತಿಲ್ಲ. ಅಪ್ಪಿತಪ್ಪಿ ಶೌಚಾಲಯದ ಒಳಗಡೆ ಹೋದರೆ ಯಾವುದೇ ನಿರ್ವಹಣೆ ಇಲ್ಲದೆ ದುರ್ನಾತದಿಂದ ಕೂಡಿರುತ್ತದೆ. ಇದರಿಂದ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಶೌಚಾಲಯಕ್ಕೆ ಬೀಗ ಹಾಕುವುದೊಂದೇ ಪರಿಹಾರವಾಗಿದೆ. ಯಾಕೆಂದರೆ ಸಂಬಂಧಪಟ್ಟವರು ಯಾವುದೇ ಗಮನಹರಿಸುತ್ತಿಲ್ಲ.ಸಾರ್ವಜನಿಕರ ದೂರು.

ಕೂಡಲೇ ಇದಕ್ಕೆ ಸಂಬಂಧಪಟ್ಟವರು ಶೌಚಾಲಯ ನಿರ್ವಹಣೆ ವ್ಯವಸ್ಥೆ ಮಾಡಬೇಕು ಎಂಬುದು ನಾಗರಿಕರು ಆಗ್ರಹಿಸಿದ್ದಾರೆ.

Leave a Reply

error: Content is protected !!