ಜೇಸಿಐ ವಲಯ ಸಮ್ಮೇಳದಲ್ಲಿ ಡಾ.ಆಶಿತ್ ಗೆ ಯುವ ಪ್ರಶಸ್ತಿ ಮತ್ತು ಉಪ್ಪಿನಂಗಡಿ ಘಟಕಕ್ಕೆ ವಿವಿಧ ಪ್ರಶಸ್ತಿ ಪುರಸ್ಕಾರಗಳು

ಶೇರ್ ಮಾಡಿ

ಉಪ್ಪಿನಂಗಡಿ: ಜೇಸಿಐ ಭಾರತದ ವಲಯ15ರ ವಲಯ ಸಮ್ಮೇಳನ ಜೇಸಿಐ ಕಾರ್ಕಳ ಗ್ರಾಮಾಂತರ ಘಟಕದ ನೇತೃತ್ವದಲ್ಲಿ ನಡೆಯಿತು.

ಜೇಸಿಐ ಉಪ್ಪಿನಂಗಡಿ ಘಟಕದಿಂದ ನಾಮನಿರ್ದೇಶನಗೊಂಡ ಅಸೋಸಿಯೇಟ್ ಪ್ರೊಫೆಸರ್, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು, ಅದ್ವಿಕ್ ಮಲ್ಟಿ ಸ್ಪೆಷಾಲಿಟಿ ದಂತ ಚಿಕಿತ್ಸಾಲಯ ಉಪ್ಪಿನಂಗಡಿ ಇಲ್ಲಿನ ಮುಖಾಂಗ ಮೂಳೆ ತಜ್ಞರಾದ ಡಾ.ಆಶಿತ್ ಎಂ.ವಿ.ಅವರಿಗೆ ವಲಯದಿಂದ ಕೊಡಮಾಡುವ ಏಕೈಕ ಪ್ರಶಸ್ತಿಯಾದ ಯುವ ಪ್ರಶಸ್ತಿಗೆ ಭಾಜನರಾದರು. ಘಟಕ ಆಯೋಜಿಸಿದ ಚಟುವಟಿಕೆಗಳಿಗೆ ವಲಯದಿಂದ ವಿವಿಧ ಪ್ರಶಸ್ತಿ, ಮನ್ನಣೆಗೆ ಮತ್ತು ಪುರಸ್ಕಾರಕ್ಕೆ ಭಾಜನವಾಯಿತು.
ವಲಯಾಧ್ಯಕ್ಷ ಜೇಸಿ ರೋಯನ್ ಉದಯ ಕ್ರಾಸ್ತ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯನ್, ಪೂರ್ವ ವಲಯಾಧ್ಯಕ್ಷ ಸುಕುಮಾರನ್, ಡಾ.ಪಲ್ಲವಿ ಕಾರ್ಕಳ, ನಿಕಟಪೂರ್ವ ವಲಯಾಧ್ಯಕ್ಷೆ ಜೇಸಿ ಸೌಜನ್ಯ ಸೇರಿದಂತೆ ವಲಯದ ಉಪಾಧ್ಯಕ್ಷರು, ವಲಯಾಡಳಿತ ಮಂಡಳಿಯ ನಿರ್ದೇಶಕ ಜೇಸಿ..ಪುರುಷೋತ್ತಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದ ಮನೆ, ಪೂರ್ವಾಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ಹರೀಶ್ ನಟ್ಟಿಬೈಲು, ಜೇಸಿ ಶಶಿಧರ್ ನೆಕ್ಕಿಲಾಡಿ, ಮತ್ತು ಉಪಾಧ್ಯಕ್ಷರಾದ ಜೇಸಿ ಕುಶಾಲಪ್ಪ, ಡಾ.ಶ್ವೇತಾ ಆಶಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!