ಮಂಗಳೂರು ವಿಮಾನ ನಿಲ್ದಾಣ : 2 ಕೋಟಿ ರೂ. ಮೌಲ್ಯದ 3.895 ಕೆಜಿ ತೂಕದ ಚಿನ್ನ ವಶ

ಶೇರ್ ಮಾಡಿ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನ.11 ರಂದು ನಾಲ್ವರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 2.01 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಬಂದಿದ್ದ ನಾಲ್ವರನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
2,01,37,250 ಮೌಲ್ಯದ 3.895 ಕೆಜಿ ತೂಕದ ರೋಢಿಯಮ್ ಲೇಪಿತ ಚಿನ್ನದ ಪಟ್ಟಿಗಳನ್ನು ಅವರ ಬ್ಯಾಗ್‌ಗಳಲ್ಲಿ ಬಚ್ಚಿಟ್ಟಿರುವುದು ಪತ್ತೆ ಮಾಡಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!