ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಲಾವತಡ್ಕದ ಸ್ಟೆರಿನ್ ಟೋಮ್ ವರ್ಗೀಸ್

ಶೇರ್ ಮಾಡಿ

ನೆಲ್ಯಾಡಿ: ಉಡುಪಿಯಲ್ಲಿ ನಡೆದ ಬುಡೋಕಾನ್ ಕರಾಟೆ ಇಂಟರ್ನ್ಯಾಷನಲ್ ವತಿಯಿಂದ ನಡೆದ 40ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 50/ 55 ಕೆಜಿ ಗ್ರೀನ್ ಬೆಲ್ಟ್ ವಿಭಾಗದಲ್ಲಿ ಕಟಾ ಹಾಗೂ ಕುಮಿಟೆಯಲ್ಲಿ ಅನುಕ್ರಮವಾಗಿ ಚಿನ್ನದ ಪದಕವನ್ನು ದೇರಳಕಟ್ಟೆಯ ಹತ್ತನೇ ತರಗತಿಯ ವಿದ್ಯಾರ್ಥಿ ಸ್ಟೆರಿನ್ ಟೋಮ್ ವರ್ಗೀಸ್ ಪಡೆದುಕೊಂಡಿದ್ದಾರೆ.
ಇವರು 2019ರ ನಡೆದ 37ನೇ ರಾಷ್ಟ್ರೀಯ ಬುಡೋಕಾನ್ ಡು-ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 40 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ವರ್ಗೀಸ್ ಥಾಮಸ್ ಹಾಗೂ ಬೀನಾ ಥಾಮಸ್ ಅವರ ಪುತ್ರನಾಗಿದ್ದು. ಶಿಹಾನ್ ಕಿಶೋರ್ ಕುಮಾರ್ ಬೆಂಗ್ರೆ ಮಂಗಳೂರು ಅವರಿಂದ ತರಬೇತಿ ಪಡೆದಿರುತ್ತಾರೆ.

Leave a Reply

error: Content is protected !!