ಕೊಕ್ಕಡ: ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ಸು ಪಲ್ಟಿ ;ಎಂಟು ಮಂದಿಗೆ ಗಾಯ

ಶೇರ್ ಮಾಡಿ

ಕೊಕ್ಕಡ: ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಬೆಂಗಳೂರು ಮೂಲದ ಯಾತ್ರಾರ್ಥಿಗಳು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು ಬಳಿಕ ಸುಬ್ರಹ್ಯಣ್ಯಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸಮೀಪದ ಮೂಡುಬೈಲು ಎಂಬಲ್ಲಿ ಬಸ್ಸು ಪಲ್ಟಿಯಾಗಿದೆ.

ಬಸ್ಸಿನಲ್ಲಿ ಒಟ್ಟು 18 ಮಂದಿ ಪ್ರಯಾಣಿಸುತ್ತಿದ್ದು, ಎಂಟು ಮಂದಿಗೆ ಗಾಯವಾಗಿದೆ.
ಗಾಯಾಳುಗಳಿಗೆ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಹೆಚ್ ಸಿ ಬಾಲಕೃಷ್ಣ,ಕುಶಾಲಪ್ಪ ಹಾಗೂ ಸಿಬ್ಬಂದಿ ಪ್ರತಾಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!