ನೆಲ್ಯಾಡಿ ರಾಮನಗರ ನಾವಲ್ಲಿ ಶ್ರೀನಾಗದೇವರು, ಅಮೆತ್ತಿಮಾರುಗುತ್ತು ಶ್ರೀರಕ್ತೇಶ್ವರಿ, ಪರಿವಾರ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಡಿ13: ಕಡಬ-ನೆಲ್ಯಾಡಿ ಗ್ರಾಮದ ರಾಮನಗರ ನಾವಲ್ಲಿ ಶ್ರೀ ನಾಗದೇವರು ,ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ, ಗುಳಿಗದೈವ,ನಾಗವಲ್ಲಿ ಶ್ರೀ ಪಂಜುರ್ಲಿ ದೈವಗಳ, ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಡಿ.9 ರಂದು ನಡೆಯಿತು.
ಬೆಳಗ್ಗೆ ಗಣಹೋಮ, ನಾವಲ್ಲಿ ಶ್ರೀ ನಾಗದೇವರ ತಂಬಿಲ, ಶ್ರೀ ಪ್ರಾತ್ರಾಜೆ ಪಂಜುರ್ಲಿ ದೈವದ ತಂಬಿಲ ನಂತರ ನಾವಲ್ಲಿ ಶ್ರೀ ಪಂಜುರ್ಲಿ ಮತ್ತು ಶ್ರೀ ಕಲ್ಲುರ್ಟಿ ದೈವಗಳಿಗೆ ತಂಬಿಲ ಸೇವೆ ನಡೆಯಿತು.ಮಧ್ಯಾಹ್ನ ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ವೈದಿಕ ಕಾರ್ಯಕ್ರಮವನ್ನು ಗಡಿಕಲ್ಲು ಶ್ರೀ ವೆಂಕಟೇಶ ಭಟ್ ರವರ ನೇತೃತ್ವದಲ್ಲಿ ಶ್ರೀವತ್ಸ ಭಟ್ ನಡೆಸಿಕೊಟ್ಟರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬೆಳ್ಳಗ್ಗೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ದೇವಿನಗರ ಬಲ್ಯ- ನೆಲ್ಯಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಅಮೆತ್ತಿಮಾರುಗುತ್ತು ಕುಟುಂಬದ ಹಿರಿಯರು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ವಹಿಸಿದರು.ಈ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿ ಶ್ರೀ ಹರಿಪ್ರಸಾದ್ ಪೆಲತ್ತಿಂಜ ರನ್ನು ಸನ್ಮಾನಿಸಲಾಯಿತು,ಸನ್ಮಾನ ಸ್ವೀಕರಿಸಿದ ಹರಿಪ್ರಸಾದ್ ಅವರು ಮಾತನಾಡುತ್ತಾ ಸನ್ಮಾನ ನನಗೆ ಇನ್ನಷ್ಟು ಜವಾಬ್ದಾರಿಯನ್ನು ನೀಡಿದೆ. ಈ ಮೂಲಕ ನನ್ನ ಮತ್ತು ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ನಂಟು ಇನ್ನಷ್ಟು ಗಟ್ಟಿಕೊಳ್ಳುತ್ತದೆ, ಎಲ್ಲರಿಗೂ ವಂದನೆಗಳು ಎಂದರು. ಕಾರ್ಯಕ್ರಮದಲ್ಲಿ ಯಕ್ಷಗಾನದ ಸೇವಕರಾದ ಶ್ರೀವಿನಾಯಕ ಯಕ್ಷಗಾನ ಮಂಡಳಿಯ ಜಯರಾಮ ಗೌಡ ನಾಲ್ಗುತ್ತು,ಅತಿಥಿ ಕಲಾವಿದ ಮುಂಡಾಳಗುತ್ತು ಪ್ರಶಾಂತ್ ರೈ, ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಅಮೆತ್ತಿಮಾರುಗುತ್ತು ಮನೆತನದ ಕೃಷ್ಣ ಶೆಟ್ಟಿ ನಂದುಗುರಿ ಕಡಬ, ನಾವಲ್ಲಿ ಶ್ರೀ ನಾಗದೇವರ ಸೇವಾಕರ್ತ ರಮೇಶ್ ಗೌಡ ನಾಲ್ಗುತ್ತು,ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ, ಅಮೆತ್ತಿಮಾರುಗುತ್ತು ರವಿ ಪ್ರಸಾದ್ ಶೆಟ್ಟಿ, ಶ್ರೀವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಯಾದವ ಶೆಟ್ಟಿ ರಾಮನಗರ, ಕೃಷ್ಣಪ್ಪಗೌಡ ಉಪಸ್ಥಿತರಿದ್ದರು.ಗಂಗಾಧರ ಶೆಟ್ಟಿ ಸ್ವಾಗತಿಸಿ, ಅಮ್ಮಿ ನಾಲ್ಗುತ್ತು ನಿರೂಪಿಸಿದರು.
ಸಂಘದ ಕಲಾವಿದರಿಂದ “ಏಕಾದಶಿ ಮಹಾತ್ಮೆ” ತಾಳಮದ್ದಳೆ ನಡೆಯಿತು.

ಸಂಘದ ಕಲಾವಿದರಿಂದ “ಏಕಾದಶಿ ಮಹಾತ್ಮೆ” ತಾಳಮದ್ದಳೆ ನಡೆಯಿತು.

Leave a Reply

error: Content is protected !!