ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಸಪ್ತಪದಿ ತುಳಿದ ನವ ಜೋಡಿ.

ಶೇರ್ ಮಾಡಿ

ನೇಸರ ಡಿ13: ಕಪಿಲಾ ನದಿ ತಟದಲ್ಲಿ ಮದುವೆಯ ಸಂಭ್ರಮ!! ಮದುವಣಗಿತ್ತಿಯಂತೆ ಸಿಂಗಾರಗೊಂಡ ಬರ್ಗುಲ ಅರಣ್ಯ!!
ಶಾಂತವಾಗಿ ಹರಿಯುವ ಕಪಿಲಾ ನದಿ ಪಕ್ಕದಲ್ಲೇ ವಿಶಾಲವಾಗಿ ಹರಡಿರುವ ಪಶ್ಚಿಮಘಟ್ಟದ ಅರಣ್ಯ ವಲಯ, ನದಿ ತಟದಲ್ಲಿ ವಿಶಾಲವಾಗಿ ಹರಡಿರುವ ಶಿಶಿಲ – ಬರ್ಗುಲ ಎಂಬ ಪ್ರದೇಶ.ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ನವಜೀವನಕ್ಕೆ ಸಪ್ತಪದಿ ತುಳಿದ ಜೋಡಿ. ನೂರಾರು ಪರಿಸರ ಪ್ರೇಮಿಗಳ, ಬಂಧುಗಳ ಉಪಸ್ಥಿತಿ.

ದಿನಾಂಕ 12-12-21 ಭಾನುವಾರ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಗೋಪಿಕಾ ಹಾಗೂ ಕುಂದಾಪುರದ ದಿನೇಶ್ ಪ್ರಕೃತಿಯ ಮಡಿಲಲ್ಲಿ ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿರಿಸಿದ ಅಪರೂಪದ ಸನ್ನಿವೇಶ.
ಶಿಶಿಲ ಸಮೀಪದ ಬರ್ಗುಲದಲ್ಲಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಚಪಲವಿರಲಿಲ್ಲ,ಆಡಂಬರದ ವ್ಯವಸ್ಥೆಗಳಿಲ್ಲ, ಕೇವಲ ಪ್ರಕೃತಿಯ ಸೌಂದರ್ಯದಲ್ಲಿ ವಿಶಾಲವಾದ ಹುಲ್ಲು ಹಾಸಿನ ನದಿ ಕಿನಾರೆಯಲ್ಲಿ ತೆಂಗಿನ ಗರಿ, ಬಾಳೆ-ತೆಂಗು ಮೊದಲಾದವುಗಳಿಂದ,ಜಿಲ್ಲೆಯ ಖ್ಯಾತ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಸಚಿನ್, ಶಶಿಧರ್ ಶೆಟ್ಟಿ ನೇತೃತ್ವದ ತಂಡ ಮದುವೆ ನಡೆಯುವ ಸ್ಥಳವನ್ನು ಸಜ್ಜುಗೊಳಿಸಿದರು.ಇವರು ನಿರ್ಮಿಸಿದ ಪ್ರಾಂಗಣದಲ್ಲಿ ಈ ಶುಭ ವಿವಾಹ.
ಮಡಂತ್ಯಾರಿನ ಗೋಪಿಕಾ ಮಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕಿ ಹಾಗೂ ಕುಂದಾಪುರದ ದಿನೇಶ್ ಮಂಗಳೂರಿನ ಸರಕಾರಿ ಇಲಾಖೆಯೊಂದರ ಉದ್ಯೋಗಿ ಇವರಿಬ್ಬರೂ ತಮ್ಮ ಬಂಧುಗಳೊಂದಿಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಅರಣ್ಯಪ್ರದೇಶದ ಕಪಿಲಾ ನದಿ ತಟದಲ್ಲಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವರಾಮ ಶಿಶಿಲ ಎಂಬವರ ತೋಟದಲ್ಲಿ ವಿವಾಹವಾದರು.

ಜಾಹೀರಾತು

Leave a Reply

error: Content is protected !!