ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ವೀಲ್ ಚೇರ್ ಹಸ್ತಾಂತರ

ಶೇರ್ ಮಾಡಿ

ನೆಲ್ಯಾಡಿ: ಬೆನ್ನು ಮೂಳೆ ಮುರಿತಕ್ಕೆ ಒಳಪಟ್ಟು ದೇಹದ ಸ್ವಾಧೀನ ಕಳೆದುಕೊಂಡು ವೀಲ್ ಚೇರ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಾ ಭವಿಷ್ಯದಲ್ಲಿ ಎದ್ದು ನಡೆಯುವ ಕನಸನ್ನು ಕಾಣುವ ವ್ಯಕ್ತಿಗಳ ಪುನರ್ವಸತಿ ಕೇಂದ್ರ ಸೇವಾಧಾಮ ಸೌತಡ್ಕ ಇಲ್ಲಿ ದಿನಾಂಕ 15-11-2022 ರಂದು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ವೀಲ್ ಚೇರ್ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ವೆಂಕಟರಮಣ ಆರ್ ಇವರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕನ್ಯಾಡಿಯ ಸೇವಾ ಭಾರತೀಯ ಅಧ್ಯಕ್ಷರಾದ ವಿನಾಯಕ ರಾವ್ ಮಾತನಾಡುತ್ತಾ ತನ್ನ ಜೀವನದಲ್ಲಿ ನಡೆದ ದುರ್ಘಟನೆಯನ್ನು ವಿವರಿಸುತ್ತಾ ವೀಲ್ ಚೇರ್ ನಲ್ಲಿ ತನ್ನ ಬದುಕನ್ನು ಸಾಗಿಸುತ್ತಿದ್ದರೂ ತನ್ನ ಸಮಸ್ಯೆಯನ್ನು ಜಯಿಸಿ ತನ್ನಂತೆ ಬೆನ್ನು ಮೂಳೆ ಮುರಿತಕ್ಕೆ ಒಳಪಟ್ಟು ನೋವು ಅನುಭವಿಸುವವರ ಕಣ್ಣೀರು ಒರೆಸುವ ಕಾರ್ಯವನ್ನು ತಾನು ಮಾಡುತ್ತಿರುವುದರಿಂದ ತನಗೆ ಆತ್ಮತೃಪ್ತಿ ಇದೆ ಎಂದು ನುಡಿದರು. ವೀಲ್ ಚೇರ್ ನಲ್ಲಿ ಬದುಕು ಸಾಗಿಸುವ ಕಷ್ಟವನ್ನು ಸ್ವತಹ ಅನುಭವಿಸುತ್ತಿರುವ ಅವರು ಜೀವನದ ಕಷ್ಟಗಳನ್ನು ಆರೋಗ್ಯದ ಸಮಸ್ಯೆಗಳನ್ನು ಹೃದಯಕ್ಕೆ ತಟ್ಟುವಂತೆ ವಿವರಿಸಿದರು.

ವೇದಿಕೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ನ ಸ್ಥಾಪಕ ಅಧ್ಯಕ್ಷರಾದ ಅಬ್ರಹಾಂ ವರ್ಗೀಸ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಅಧಿಕಾರಿಯಾದ ಡಾ.ಸದಾನಂದ ಕುಂದರ್ ಉಪಸ್ಥಿತರಿದ್ದರು. ಸೀನಿಯರ್ ಚೇಂಬರ್ ಸದಸ್ಯರಾದ ವಿ ಆರ್ ಹೆಗಡೆ ಸೀನಿಯರ್ ಚೇಂಬರ್ ವಾಣಿಯನ್ನು ವಾಚಿಸಿದರು. ಸದಸ್ಯರಾದ ವಿಶ್ವನಾಥ ಶೆಟ್ಟಿ ಕೆ. ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಜಾನ್ ಪಿ ಜೆ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಲಹರಿ ಸಂಗೀತ ಕಲಾಕೇಂದ್ರ ಐ ಐ ಸಿ ಟಿ ನೆಲ್ಯಾಡಿ
ಇದರ ಬಾಲ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

See also  ಸಂಭಾವ್ಯ ರೈಲು ಅವಘಡ ತಪ್ಪಿಸಿದ 70ರ ಮಹಿಳೆ!

Leave a Reply

Your email address will not be published. Required fields are marked *

error: Content is protected !!