ನೆಲ್ಯಾಡಿ: ಕಳೆದುಹೋದ ಬ್ಯಾಗನ್ನು ಮರಳಿ ಪಡೆಯಲು ಕೊರಗಜ್ಜನ ಮೊರೆ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕು ಪೆರಾಬೆ ಗ್ರಾಮದ ಮೊನೊಳಿಗೆ ನಿವಾಸಿ ಪ್ರವೀಣ್ ಕುಮಾರ್ ಎಂಬವರು ರಾಮನಗರಕ್ಕೆ ಬರುವ ವೇಳೆ ಮಾದೇರಿ ಜಾರಂಗೇಲ್ ಎಂಬಲ್ಲಿ ರಸ್ತೆ ಬದಿ ಬ್ಯಾಗೊಂದು ಬಿದ್ದು ಸಿಕ್ಕಿದ್ದು, ಮಳೆ ಬರುತ್ತಿದ್ದ ಕಾರಣ ರಾಮನಗರದ ಆಶಾ ಕಾರ್ಯಕರ್ತೆ ಚಿತ್ರಾ ರವರ ಮನೆಗೆ ತೆರಳಿ ಬ್ಯಾಗನ್ನು ಪರಿಶೀಲಿಸಿದಾಗ ರೂ ಹತ್ತು ಸಾವಿರದ ಹತ್ತು ರೂಪಾಯಿ ನಗದು ಹಾಗೂ ಕೆಲವು ಚೀಟುಗಳು ಅಲ್ಲದೆ ಫೋನ್ ನಂಬರ್ ಇರುವ ಪೇಪರ್ ಸಿಕ್ಕಿದ್ದು. ಆ ನಂಬರಿಗೆ ಸಂಪರ್ಕಿಸಿದಾಗ ಬ್ಯಾಗ್ ಕಳೆದುಕೊಂಡ ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ದಿವಂಗತ ಅಬ್ದುಲ್ ಹಮೀದ್ ರವರ ಮಗ ಮುಸ್ತಾಪ ಮೊರಂಕಲಾ ಅವರದಾಗಿತ್ತು.
ಬ್ಯಾಗನ್ನು ವಾರಸುದಾರರಿಗೆ ಹಸ್ತಾಂತರಿಸುವ ವೇಳೆ ಮುಸ್ತಾಪ ಮೊರಂಕಲಾ ಅವರು ಕಳೆದುಹೋದ ಬ್ಯಾಗನ್ನು ಮರಳಿ ಪಡೆಯಲು ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್, ಕೃಷ್ಣ ರಾಮನಗರ, ಚಿತ್ರಾ ರಾಮನಗರ, ಇವರ ಸಮ್ಮುಖದಲ್ಲಿ ನೀಡಲಾಯಿತು.
ಮಾನವೀಯತೆ ಮೆರೆದ ಪ್ರವೀಣ್ ಕುಮಾರ್ ಹಾಗೂ ಆಶಾ ಕಾರ್ಯಕರ್ತೆ ಚಿತ್ರಾ ರಾಮನಗರ ಅವರಿಗೆ ಮುಸ್ತಾಪ ಮೊರಂಕಲಾ ಕೃತಜ್ಞತೆ ಸಲ್ಲಿಸಿದರು.

See also  ಉಪ್ಪಾರಪಳಿಕೆ: ಶ್ರೀಕೃಷ್ಣ ಮೈದಾನದಲ್ಲಿ 23ನೇ ವರ್ಷದ ಮೊಸರು ಕುಡಿಕೆ ಉತ್ಸವ

Leave a Reply

Your email address will not be published. Required fields are marked *

error: Content is protected !!