
ಶಿರಾಡಿ: ಶಿರಾಡಿ ಗ್ರಾಮದ ಬಾಗಿಲುಗದ್ದೆ ಎಂಬಲ್ಲಿ ಬೈನೆ ಮರವನ್ನು ಕಾಡಾನೆಯು ದೂಡಿ ಬೀಳಿಸಿದ ಪರಿಣಾಮ ಮರವು ವಿದ್ಯುತ್ತಿ ನ ಎಚ್ ಟಿ ಲೈನಿಗೆ ಬಿದ್ದು ಹಾನಿಯಾದ ಘಟನೆ ನ.24ರ ರಾತ್ರಿ ನಡೆದಿದೆ.

ಮರವು ಎಚ್ ಡಿ ಲೈನ್ ನ ಮೇಲೆ ಬಿದ್ದ ತಕ್ಷಣ ವಿದ್ಯುತ್ ಕಡಿತಗೊಂಡಿರುವುದರಿಂದ ದೊಡ್ಡ ಪ್ರಮಾಣದ ಅಪಘಾತ ತಪ್ಪಿದಂತಾಗಿದೆ.
ಪವರ್ ಮ್ಯಾನ್ ದಿನೇಶ್ ರವರು ಕಡಿತಗೊಂಡ ವಿದ್ಯುತ್ತನ್ನು ಸರಿಪಡಿಸಲು ಸ್ಥಳಕ್ಕೆ ತೆರಳಿದ ವೇಳೆ ಆನೆ ಗರ್ಜಿಸಿದರ ಪರಿಣಾಮ ಹೆದರಿ ಅಲ್ಲಿಂದ ತೆರಳಿದರು.
ಇಂದು ಬೆಳಗ್ಗೆ ನೆಲ್ಯಾಡಿ ಮೆಸ್ಕಾಂ ನ ಜೂನಿಯರ್ ಇಂಜಿನಿಯರ್ ರಮೇಶ್ ರವರು ಪವರ್ ಮ್ಯಾನ್ ಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಕಾರದೊಂದಿಗೆ ದುರಸ್ತಿಗೊಳಿಸಿದರು.
ಕಾಡಾನೆಗಳ ಉಪಟಳ:
ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳವು ಹೆಚ್ಚಾಗುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಗಮನಹರಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ದೊಡ್ಡ ಅನಾಹುತಗಳು ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.





