




ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದಿಂದ ಕಡಬ ಜೂನಿಯರ್ ಕಾಲೇಜ್ ನಲ್ಲಿ ನಡೆದ ಸ್ವಾಥ್ಶ ಸಂಕಲ್ಪ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡಿ. ವಿದ್ಯಾರ್ಥಿ ಜೀವನ ಬದುಕಿನ ಪ್ರಮುಖ ಘಟ್ಟ ವಿದ್ಯಾರ್ಜನೆಗೆ ಕೇವಲ ಅಂಕ ಪಟ್ಟಿ ಸೀಮೀತವಾಗಬಾರದು ಪ್ರತೀ ವಿದ್ಯಾರ್ಥಿಯೂ ತಮ್ಮ ತಂದೆ ತಾಯಿ ಹಾಗೂ ಪೋಷಕರು ಪಡುವ ಕಷ್ಟವನ್ನು ಅರ್ಥೈಸಿಕೊಂಡು ತಮ್ಮ ಅನುಕೂಲತೆಗೆ ತಕ್ಕಂತೆ ವಿದ್ಶಾರ್ಜನೆಯಲ್ಲಿ ಪಾಲ್ಗೊಂಡಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಯಶಸ್ಸು ಗಳಿಸಲು ಸಾಧ್ಶ. ಮನೆಯ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೇ ಸಹವಾಸದಿಂದ ದುಷ್ಚಟವೆಂಬ ಕೆಟ್ಟ ಕೆಲಸಗಳಿಗೆ ತಮ್ಮ ವಿದ್ಯಾರ್ಥಿ ಜೀವನವನ್ನು ವ್ಶಯ ಮಾಡುವುದರಿಂದ ಮುಂದೊಂದು ದಿನ ತನೊಬ್ಬನೇ ಪರಿತಪಿಸುವ ಸಂದರ್ಭ ಬರಬಹುದು. ಯೋಜನೆಯ ಸ್ವಸಹಾಯ ಸಂಘಗಳ ಸದಸ್ಶರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಲಿಕೆಗೆ ಆರ್ಥಿಕ ನೆರವು ನೀಡುತ್ತಿದ್ದು ಕುಟುಂಬದ ಸರ್ವತೋಮುಖ ಅಭಿವೃಧ್ಧಿ ಯೋಜನೆಯ ದ್ಶೇಯ ವಾಗಿರುತ್ತದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಪೋಷಕರಿಗೆ ತಿಳಿಸುವಂತಾಗಬೇಕು. ದುಷ್ಚಟಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲಾ ವಿದ್ಯಾರ್ಥಿಗಳೂ ಪಣತೊಡಬೇಕೆಂದರು.
ಕಾರ್ಯಕ್ರಮವನ್ನು ಕಡಬ ವಲಯ ಜನಜಾಗೃತಿ ವೇದಿಕೆ ಅಧ್ಶಕ್ಷ ಕರುಣಾಕರ ಗೊಕಟೆ ಉಧ್ಘಾಟಿಸಿದರು. ಕಾಲೇಜು ಪ್ರಾಂಶುಪಾಲರಾದ ಜನಾರ್ಧನ ಕೆ ಯನ್ ರವರು ಅಧ್ಶಕ್ಷತೆ ವಹಿಸಿದರು. ತಾಲೂಕು ಜನಜಾಗೃತಿ ವೇದಿಕೆ ಸದಸ್ಶರಾದ ಶಿವಪ್ರಸಾದ್ ರೈ ಮೈಲೇರಿ ಸ್ವಾಸ್ಥ್ಶ ಸಮಾಜದ ಅವಶ್ಶಕತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ಸೇವಾಪ್ರತಿನಿಧಿಗಳಾದ ನಳಿನಿ ಅಡ್ಡಗದ್ದೆ ಹಾಗೂ ಸವಿತಾ ದೊಡ್ಡಕೊಪ್ಪ ಮತ್ತು ಕಾಲೇಜು ಉಪನ್ಶಾಷಕರು ಉಪಸ್ಥಿತರಿದ್ದರು.
ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ. ಕನ್ನಡ ಉಪನ್ಶಾಶಕಿ ಲಾವಣ್ಶ ವಂದಿಸಿದರು.
ಉಪನ್ಶಾಸಕರಾದ ಸೆಲೀನ್ ರವರು ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪಿಯುಸಿ ಯ 158 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡಕೊಂಡರು.

