ನೆಲ್ಯಾಡಿ: ಇಲ್ಲಿನ ಸಾಫಿನ್ಸಿಯ ಬೆಥನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲರಾದ ಫಾ.ಜಿಜನ್ ಅಬ್ರಹಾಂರವರು ಮಾತನಾಡಿ “ಏಡ್ಸ್ ಒಂದು ಮಾರಣoತಿಕ ರೋಗವಾಗಿದ್ದು, ಇದನ್ನು ನಿರ್ಮೂಲನೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಡಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಯುತ ವಿಶ್ವನಾಥ್ ಮಾತನಾಡಿ “ಏಡ್ಸ್ ವಿರುದ್ಧ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಬಹಳ ಮುತುವರ್ಜಿಯಿಂದ ಹೋರಾಡುತಿದೆ. ಎನ್.ಎಸ್.ಎಸ್. ಕೂಡ ಸಮಾಜಕ್ಕೆ ಜಾಗೃತಿ ಮೂಡಿಸುವ ಎನ್ಎಸ್ಎಸ್ ನ ಪಾತ್ರ ಮಹತ್ತರವಾದುದು” ಎಂದು ಹೇಳಿದರು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ|ಶಿಶಿರ ರವರು ಏಡ್ಸ್ ನ ಮತ್ತು ಹೆಚ್ಐವಿ ಹರಡುವಿಕೆ, ಲಕ್ಷಣಗಳು ಮುಂತಾದ ವಿಷಯದ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಅರೋಗ್ಯ ಕೇಂದ್ರದ ಶ್ರೀಯುತ ಪ್ರಜ್ವಲ್, ಕಾಲೇಜು ಸಾಂಸ್ಕೃತಿಕ ಸಂಘದ ಸಂಯೋಜಕಿ ಶ್ರೀಮತಿ ರಕ್ಷಾ ಜೈನ್ ಉಪಸ್ಥಿತರಿದ್ದರು. ಕೊನೆಯಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.
ವಿದ್ಯಾರ್ಥಿ ಸಮ್ಯಕ್ತ್ ಜೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕು. ಮಸೂದ ಸ್ವಾಗತಿಸಿ ಕು. ಹಂಸೀಫಾ ವಂದಿಸಿದರು.