ಸುಬ್ರಮಣ್ಯ: ವಿಚಾರ ಸಂಕಿರಣ ಕಾರ್ಯಕ್ರಮ

ಶೇರ್ ಮಾಡಿ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಸೈಬರ್ ಕ್ರೈಂ, ವುಮೆನ್ ಸೇಫ್ಟಿ, ಸೈಬರ್ ಕ್ರೈಂ ಸಲ್ಯೂಷನ್ ಎಂಬ ವಿಷಯದಲ್ಲಿ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಮತ್ತು ಯೂತ್ ರೆಡ್ ಕ್ರಾಸ್ ಘಟಕ ಮತ್ತು ವಿದ್ಯಾರ್ಥಿನಿಯರು ಮಹಾವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ ನ್ಯಾಪ್ಕಿನ್ ಸಂಗ್ರಹಣ ಮೆಷಿನ್ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ದಿನೇಶ್ ಪಿ.ಟಿ ಪ್ರಾಂಶುಪಾಲರು ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇವರು ವಹಿಸಿದ್ದರು. ಶ್ರೀಮತಿ ಸುನೀತಾ ಗ್ರಂಥ ಪಾಲಕಿ ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಅನುಷ್. ಜಿ ಶೆಟ್ಟಿ, ಸಿಇಓ ಪೊಲೈಟ್ ಮಾಸ್ಟರ್ ಸೈಬರ್ ಕ್ರೈಂ ಇಂಟರ್ವೆನ್ಷನ್ ಆಫೀಸರ್ ಮಂಗಳೂರು ಮತ್ತು ಇವರ ತಂಡ ನಿರ್ವಹಿಸಿದರು.
ಮಹಿಳಾ ಸಬಲೀಕರಣ ಘಟಕದ ಸಂಯೋಜಕಿಯಾದ ಶ್ರೀಮತಿ ಸುಮಿತ್ರ ಸ್ವಾಗತಿಸಿದರು. ಸಹ ಸಂಯೋಜಕಿ ಶ್ರೀಮತಿ ಪ್ರಮೀಳಾ ವಂದಿಸಿದರು. ಕೀರ್ತನ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!