ನೆಟ್ಟಣ: ಕರ್ನಾಟಕ ಸಿರೋಮಲಬಾರ್ ಕ್ಯಾಥೋಲಿಕ್ ಅಸೋಶಿಯೇಷನ್(ರಿ) ಹಾಗೂ ಸಂಟ್ ಮೇರಿಸ್ ಚರ್ಚ್, ನೆಟ್ಟಣ ಇದರ ಆಶ್ರಯದಲ್ಲಿ ನೆಟ್ಟಣ ಪೇಟೆಯಲ್ಲಿ ಕ್ರಿಸ್ಮಸ್ ಈವ್ 2k22 ಎಂಬ ಹೆಸರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಿಸಲಾಯಿತ್ತು.
ಸಂಟ್ ಮೇರಿಸ್ ಚರ್ಚಿನ ಸದಸ್ಯರುಗಳು ಹಾಗೂ ಜಾತಿ – ಧರ್ಮ ಬೇಧ ಭಾವ ವಿಲ್ಲದೆ ಸಾರ್ವಜನಿಕರು ಭಾಗವಹಿಸದರು. ಸೌಹಾರ್ದ ಕ್ರಿಸ್ಮಸ್ ಸಮಾರಂಭವನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಶಂಕರ್ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸತೀಶ್ ಎರ್ಕ, ನೆಟ್ಟಣ ಜುಮ್ಮಾ ಮಸೀದಿಯ ಧರ್ಮಗುರು ಜಲೀಲ್ ಆರ್ಷದಿ ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ವಂದನಿಯ ಫಾ.ಬಿಜಿಲಿ ತೋಮಸ್. ಒ. ಐ. ಸಿ ಇವರು ಸೌಹಾರ್ದತೆಯ ಸಂದೇಶವನ್ನು ನೀಡಿದರು.
ಚರ್ಚಿನ ಧರ್ಮಗುರು ಫಾ.ಆದರ್ಶ್ ಜೋಸೆಫ್ ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ರಾಜೇಶ್ ಅಧ್ಯಕ್ಷರು ಕೆ ಎಸ್ ಎಂ ಸಿ ಎ ವಂದಿಸಿದರು. ವಿಜೇಶ್ ಕಾರ್ಯಕ್ರಮವನ್ನು ನೀರೂಪಿಸಿದರು.