ನೆಲ್ಯಾಡಿ: ಲಹರಿ ಸಂಗೀತ ಕಲಾ ಕೇಂದ್ರ ಐ ಐ ಸಿ ಟಿ ನೆಲ್ಯಾಡಿ ಇದರ ಪ್ರಥಮ ವಾರ್ಷಿಕೋತ್ಸವ “ರಾಗಾಂತರಂಗ” ಲಹರಿ ಸಾಧಕ ರತ್ನ ಪ್ರಶಸ್ತಿ ಪ್ರಧಾನ, ಕಲಾ ಸಾಧಕರಿಗೆ ಸನ್ಮಾನ, ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಮತ್ತು ಸುಗಮ ಸಂಗೀತ ಹಾಗೂ ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದರು ಕೊಯಿಲ ತುಳುನಾಡ ತುಳುಶ್ರೀ ಅಭಿನಯ ಮಾಣಿಕ್ಯ ರಮಾ ಬಿ.ಸಿ. ರೋಡ್ ಅಭಿನಯದ “ಪಂಡ ಕೇನುಜೆರ್” ತುಳು ಹಾಸ್ಯ ನಾಟಕ ಜನವರಿ 7ರಂದು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿಯ ರಂಗಭಾರತಿ ವೇದಿಕೆಯಲ್ಲಿ ಸಂಜೆ 6:00 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ನೆಲ್ಯಾಡಿಯ ಜ್ಯೋತಿಷ್ಯರಾದ ಶ್ರೀಧರ್ ಗೋರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಶ್ರೀ ಮಾಲಕರಾದ ಸತೀಶ್ ಕೆ.ಎಸ್, ಅಭ್ಯಾಗತರು ನೆಲ್ಯಾಡಿ ಸೈಂಟ್ ಆಲ್ಫೋನ್ಸಾ ಚರ್ಚ್ ನ ರೆ.ಫಾ.ಬಿನೋಯ್ ಜೋಸೆಫ್, ಸಂಗೀತ ಗುರುಗಳಾದ ಉಪನ್ಯಾಸಕ ವಿಶ್ವನಾಥ್ ಶೆಟ್ಟಿ ಕೆ ಭಾಗವಹಿಸಲಿದ್ದಾರೆ.
ಲಹರಿ ಸಾಧಕ ರತ್ನ ಪ್ರಶಸ್ತಿಯನ್ನು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿ ಯ ದೈಹಿಕ ಶಿಕ್ಷಕರಾದ ಜನಾರ್ದನ ಟಿ ಯವರಿಗೆ ಪ್ರಧಾನ ಹಾಗೂ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಗೀತ ಗುರುಗಳಾದ ಕುದ್ಮಾರ್ ವಿದ್ವಾನ್ ವೆಂಕಟರಮಣ್ ಕುಂಞಣ್ಣಾಯ, ಶಾಸ್ತ್ರೀಯ ಸಂಗೀತ ಗುರುಗಳಾದ ಕೊಕ್ಕಡ ಶ್ರೀಮತಿ ವಿದುಷಿ ಪದ್ಮಾವತಿ ವಿ ಬಾಳ್ತಿಲ್ಲಾಯ, ಯಕ್ಷಗಾನ ಭಾಗವತರಾದ ನೆಲ್ಯಾಡಿ ಲಕ್ಷ್ಮೀನಾರಾಯಣ ಶೆಟ್ಟಿ ಕುಂದಡ್ಕ, ಸಂಗೀತ ನಾಟಕ ನಿರ್ದೇಶಕರಾದ ದಯಾನಂದ ಆಚಾರ್ಯ ವಾಣಿಶ್ರೀ ನೆಲ್ಯಾಡಿ, ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿಯ ಕುಶಾಲಪ್ಪ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಂದು ಸಂಘಟಕರು ತಿಳಿಸಿದರು.