ಇಚ್ಲಂಪಾಡಿ ಗ್ರಾಮದ 2ನೇ ವಾರ್ಡ್‍ನ ಕರ್ತಡ್ಕ ಎಂಬಲ್ಲಿ ತೋಡಿಗೆ ಸಂಪರ್ಕ ಸೇತುವೆ ಇಲ್ಲದೆ ಜನತೆ ಮಳೆಗಾಲದಲ್ಲಿ ಅಡಿಕೆ ಮರದ ಪಾಲ ನಿರ್ಮಿಸಿ ಸಂಚರಿಸುತ್ತಿದ್ದರು. ಹಲವು ವರ್ಷಗಳ ಬೇಡಿಕೆ ಸ್ವಂದಿಸಿ ಸರಕಾರ ಅನುದಾನ ಒದಗಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿ ಲೋಕೋಪಯೋಗಿ ಇಲಾಖೆಯ ಗ್ರಾಮ ಬಂಧು ಸೇತು ಯೋಜನೆಯಡಿ ಸರ್ವಋತು ಸೇತುವೆ 18 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡು. ಇಂದು ಸಚಿವ ಎಸ್ ಅಂಗಾರರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್ ಭಾಸ್ಕರ ಗೌಡ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ವಿಶ್ವನಾಥ್ ಗೌಡ, ದಿವೇಶ್ ಕಲ್ಯ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.