ನೆಲ್ಯಾಡಿ ಮೆಸ್ಕಾಂ ಸಬ್‍ಸ್ಟೇಷನ್ ನಲ್ಲಿ 7ಕೋಟಿ 65 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವ ಎಸ್ ಅಂಗಾರ ರಿಂದ ಚಾಲನೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಮೆಸ್ಕಾಂ ಸಬ್‍ಸ್ಟೇಷನ್ ನಲ್ಲಿ 7ಕೋಟಿ 65 ಲಕ್ಷ ವೆಚ್ಚದಲ್ಲಿ 12.5 ಎಮ್ ವಿ ಎ ಸಾಮಥ್ಯದ ವಿದ್ಯುತ್ ವಿತರಣಾ ಪರಿವರ್ತಕದ ಅಳವಡಿಕೆ ಹಾಗೂ 39 ವಿದ್ಯುತ್ ಪರಿವರ್ತಕಗಳ ಹಳೆಯ ತಂತಿಗಳ ಬದಲಾಯಿಸಿ ಹೊಸ ತಂತಿಗಳ ಅಳವಡಿಕೆ ಹಾಗೂ 3 ಹೊಸ ವಿದ್ಯುತ್ ಪರಿವರ್ತಕಗಳ ಅಳವಡಿಕೆ ಕಾಮಗಾರಿಗೆ ಇಂದು ಸಚಿವ ಎಸ್ ಅಂಗಾರ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಜಿಕುಮಾರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಕಡಬ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್ ಭಾಸ್ಕರ ಗೌಡ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಗೋಳಿತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಗೌಡ, ನೆಲ್ಯಾಡಿ ಮೆಸ್ಕಾಂ ಶಾಖಾಧಿಕಾರಿ ರಮೇಶ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ವಿದ್ಯುತ್ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ರವೀಂದ್ರ.ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

error: Content is protected !!