ಕೊಕ್ಕಡ-“ಸುಗ್ಗಿ ನೇಜಿ ಸಂಭ್ರಮ- 2021” ||ಕೊಕ್ಕಡ ಕಪಿಲ ಜೇಸಿಯ ಅಧ್ಯಕ್ಷ JC.ಕೆ.ಶ್ರೀಧರ ರಾವ್ ಮೇದಿನಿ ಫಾರ್ಮ್ ಕಳಂಜ ||

ಶೇರ್ ಮಾಡಿ

ನೇಸರ ಡಿ.20: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವರ ಇತಿಹಾಸಪ್ರಸಿದ್ಧ ಕೋರಿ ಜಾತ್ರೆ ನಡೆಯುವ ಪೂಕರೆ ಗದ್ದೆಯಲ್ಲಿ ಡಿಸೆಂಬರ್ 19ರ ರವಿವಾರ ವಿವಿಧ ಸಂಘಟನೆಗಳ ಹಾಗೂ ವಿವಿಧ ಕಾಲೇಜುಗಳ ಎನ್ ಎಸ್ ಎಸ್ ಘಟಕಗಳ ಸಹಭಾಗಿತ್ವದಲ್ಲಿ “ಸುಗ್ಗಿ ನೇಜಿ ಸಂಭ್ರಮ- 2021” ನಡೆಯಿತು.


ಬೆಳಗ್ಗೆ 10.30ಕ್ಕೆ ದೇವರ ಸಮ್ಮುಖದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ,ಬೃಹತ್ ಮೆರವಣಿಗೆಯ ಮೂಲಕ ಶ್ರೀ ವೈದ್ಯನಾಥೇಶ್ವರ ದೇವಳದಿಂದ ಗದ್ದೆಗೆ ತೆರಳಿ, ನೇಜಿ ನಾಟಿ ಕಾರ್ಯಕ್ರಮಕ್ಕೆ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ ಮತ್ತು ಸಮಿತಿ ಸದಸ್ಯರು,ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಡಿಗ್ರಿ ಕಾಲೇಜ್ ಉಜಿರೆ , ಮೇಲಂತಬೆಟ್ಟು ಸರಕಾರಿ ಪದವಿ ಕಾಲೇಜ್ ಬೆಳ್ತಂಗಡಿ, ವಿಶ್ವವಿದ್ಯಾನಿಲಯ ಡಿಗ್ರಿ ಕಾಲೇಜ್ ನೆಲ್ಯಾಡಿ,ಸಪಿಯೆನ್ಶಿಯ ಬೆಥನಿ ಕಾಲೇಜ್ ನೆಲ್ಯಾಡಿ. ಈ ಎಲ್ಲಾ ಕಾಲೇಜುಗಳ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಹಾಗೂ ಯೋಜನಾಧಿಕಾರಿಗಳು,ಕೊಕ್ಕಡ ಕಪಿಲ ಜೇಸಿಯ ಪದಾಧಿಕಾರಿಗಳು,ವಿವಿಧ ಸಂಘಟನೆಗಳ ಸದಸ್ಯರು,ರೈತರು, ಧಾರ್ಮಿಕ ಮುಖಂಡರು,ಕ್ಷೇತ್ರದ ಭಕ್ತರು ನೇಜಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಭತ್ತದ ಕೃಷಿ ಅತ್ಯಂತ ವಿರಳವಾಗಿದೆ, ಈ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಭತ್ತದ ನಾಟಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ನೇಜಿ ನೆಟ್ಟು ಹೊಸ ಅನುಭವದೊಂದಿಗೆ ಅತ್ಯಂತ ಸಂಭ್ರಮಪಟ್ಟರು, ಭಾಗವಹಿಸಿದ ಎಲ್ಲಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಹಾಗೂ ಯೋಜನಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಕಾರ್ಯಕ್ರಮದ ಸಂಘಟಕರಾದ ಕೆ.ಶ್ರೀಧರ ರಾವ್ ರವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


ಕಾರ್ಯಕ್ರಮದ ವ್ಯವಸ್ಥಾಪಕ ಕೊಕ್ಕಡ ಕಪಿಲ ಜೇಸಿಯ ಅಧ್ಯಕ್ಷ JC.ಕೆ
.ಶ್ರೀಧರ ರಾವ್ ಮೇದಿನಿ ಫಾರ್ಮ್ ಕಳಂಜ ಸ್ವಾಗತಿಸಿ,ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಜಾಹೀರಾತು

Leave a Reply

error: Content is protected !!