ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 4 ವಿದ್ಯಾರ್ಥಿಗಳು INSPIRE AWARD ಸ್ಪರ್ಧೆಯಲ್ಲಿ ಆಯ್ಕೆ

ಶೇರ್ ಮಾಡಿ

ಪುತ್ತೂರು : ಭಾರತ ಸರಕಾರದ ಅಧೀನದಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವಿದ್ಯಾಭ್ಯಾಸದೊಂದಿಗೆ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು “INSPIRE AWARD“ ಯೋಜನೆಯನ್ನು ಆಯೋಜಿಸಿತ್ತು.

ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ 5 ತಂಡಗಳು ಯೋಜನೆಗಳನ್ನು ಪ್ರಸ್ತುತ ಪಡಿಸಿದ್ದು, ಅದರಲ್ಲಿ 4 ತಂಡಗಳ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. 10ನೇ ತರಗತಿಯ ಪಿ ಯುಕ್ತಶ್ರೀ (ಹೇಮಚಂದ್ರ ಮತ್ತು ಹೈಮಿತಾ ದಂಪತಿಗಳ ಪುತ್ರಿ) ಅವರ FINGER PRINT UIDAI BASED ATM, 9ನೇ ತರಗತಿಯ ವಿಶ್ರುತ್ ರೈ ( ಗಿರೀಶ್.ರೈ ಹಾಗೂ ಸುಪ್ರೀತಾ ದಂಪತಿಗಳ ಪುತ್ರ). BANANA STEM TO ISSUE PAPER & CARDBOARD 7ನೇ ತರಗತಿಯ ಪ್ರೀತಿ ಪಿ ಪ್ರಭು(ಪುಂಡಲೀಕ ಪ್ರಭು ಹಾಗೂ ಶ್ರೀಮತಿ ನಾಗಮಣಿ.ಪಿ.ಪ್ರಭು ಇವರ ಪುತ್ರಿ) DWIPATHI TWO LANE FULLY AUTOMATIC SEED SOWING MACHINE 7ನೇ ತರಗತಿಯ ಪ್ರಜ್ವಲ್.ವಿ.ಬಿ (ವಿನೋದ್ ಕುಮಾರ್ ಕೆ ಹಾಗೂ ಶ್ರೀಮತಿ ಬಿಂಧು ಎಚ್ ದಂಪತಿಗಳ ಪುತ್ರ) ಅವರ ECO FRIENDLY ARECANUT DRYER ವಿಜ್ಞಾನ ಮಾದರಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತವೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್.ರೈ ಅವರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!