ನೆಲ್ಯಾಡಿ:ನಾಯಕತ್ವದ ಗುಣವನ್ನು ಯುವ ಸಮುದಾಯಕ್ಕೆ ನೀಡುವ ಸಂಸ್ಥೆ ಎಂದರೆ ಜೇಸಿ ಸಂಸ್ಥೆ. ರಾಜ್ಯ ರಾಷ್ಟ್ರಮಟ್ಟದಲ್ಲಿ ಎಲ್ಲರನ್ನು ಕರೆದು ಕೈದೋಗಿಸುವ ಸಂಸ್ಥೆ ಇದ್ದರೆ ಅದು ಜೇಸಿ ಸಂಸ್ಥೆಯಾಗಿದೆ. ಒಬ್ಬ ವ್ಯಕ್ತಿ ಉತ್ತಮ ನಾಯಕತ್ವ ಗುಣವನ್ನು ಬೆಳೆಸಬೇಕಾದರೆ ಆತ ಜೇಸಿ ಸದಸ್ಯನಾಗಬೇಕು ಎಂದು ನೆಲ್ಯಾಡಿ ಜೇಸಿಐ ನ ಜೇಸಿ ಹೆಚ್ ಜಿ ಎಫ್ ದಯಾಕರ ರೈ.ಕೆ.ಯಂ ಮತ್ತು ತಂಡದ ಪಥ ಸ್ವೀಕಾರ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಶಿಕುಮಾರ್ ರೈ ಬಾಲ್ಯೋಟ್ಟು ನಿರ್ದೇಶಕರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಮಾತನಾಡಿ ಜೇಸಿ ಯ ಮೂಲಕ ಕಲಿಯುವಂತಹ ಹಲವಾರು ವಿಷಯಗಳು ಇವೆ, ಮಾನವೀಯ ಗುಣ ಬರಬೇಕಾದರೆ ಇಂತಹ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರನ್ನು ಸಹೋದರತೆಯಲ್ಲಿ ಕಾಣುವಂತಹ ಜೇಸಿ ಸಂಸ್ಥೆಯು, ನನ್ನಲ್ಲಿರುವ ಶಕ್ತಿಯನ್ನು ಕಂಡು ಕೊಳ್ಳುವುದು ಇಂತಹ ಸಂಸ್ಥೆಯಿಂದ ಬರುತ್ತದೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಸಹೋದರತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. ಅಲ್ಲದೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ಹೆಚ್ ಜಿ ಎಫ್ ದಯಾಕರ ರೈ.ಕೆ.ಯಂ ಹಾಗೂ ವಲಯ 15ರ ಜೇಸಿಐ ಭಾರತದ ವಲಯಾಧ್ಯಕ್ಷರಾದ ಜೆ ಎಫ್ ಡಿ ಪುರುಷೋತ್ತಮ ಶೆಟ್ಟಿ ಇವರನ್ನು ವೈಯಕ್ತಿಕ ನೆಲೆಯಲ್ಲಿ ಶಾಲು ಹೊಂದಿಸಿ ಫಲ ಪುಷ್ಪ ನೀಡಿ ಗೌರವಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಜಾರ್ಜ್ ಟಿ ಎಸ್, ಪ್ರಾಂಶುಪಾಲರು ಬೆಥನಿ ಪಿ ಯು ಕಾಲೇಜ್, ನೂಜಿ ಬಾಳ್ತಿಲ ಮಾತನಾಡಿ ನೆಲ್ಯಾಡಿ ಜೇಸಿ ಎಂದರೆ ನೆಲ್ಯಾಡಿಯ ಪ್ರಭಾವಿ, ಮೇಧಾವಿ ವ್ಯಕ್ತಿಗಳ ಸಮ್ಮಿಲನವಾಗಿದೆ. ಜೇಸಿ ಎಂದರೆ ನನ್ನೊಳಗಿನ ನಾನು ಮಾಯವಾಗಿ ನನ್ನಲ್ಲಿ ಇರುವಂತಹ ನಾನನ್ನು ಅರ್ಥ ಮಾಡಿಕೊಳ್ಳುವಂತಹ ಒಂದು ಸಂಸ್ಥೆಯಾಗಿದೆ ಎಂಬ ಭಾವನೆ ನನ್ನದು ಎಂದರು.
ವಲಯ 15ರ ಜೇಸಿಐ ಭಾರತದ ವಲಯಾಧ್ಯಕ್ಷರಾದ ಜೆ ಎಫ್ ಡಿ ಪುರುಷೋತ್ತಮ ಶೆಟ್ಟಿ ಮಾತನಾಡಿ ಸುಮಾರು 40 ವರ್ಷಗಳ ಇತಿಹಾಸವಿರುವ ನಲ್ಯಾಡಿ ಘಟಕವು ಕಾರ್ಯ ಚಟುವಟಿಕೆಗಳಲ್ಲಿ ಹೆಸರು ವಾಸಿಯಾದ ಘಟಕವಾಗಿದೆ. ಒಬ್ಬ ಉತ್ತಮ ನಾಯಕನಾಗಿ ಬೆಳೆಯಬೇಕಾದರೆ ಆತನಿಗೆ ಸಿಕ್ಕಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಪ್ರಶಸ್ತಿಯನ್ನು ಅಥವಾ ಮನ್ನಣೆಗಳನ್ನು ಪಡೆದು ಸನ್ಮಾನಗಳನ್ನು ಪಡೆದ ಕೂಡಲೇ ಆತ ನಾಯಕನಾಗುವುದಿಲ್ಲ. ಆತನ ಜವಾಬ್ದಾರಿಯೊಂದಿಗೆ ಅಧಿಕಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾನೆ ಆತನೇ ನಿಜವಾದ ನಾಯಕನಾಗುತ್ತಾನೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ತನ್ನ 18 ವರ್ಷದಿಂದ 40 ವಯಸ್ಸಿನ ಒಳಗೆ ಅಂದರೆ 22 ವರ್ಷ ಆತ ಜೇಸಿ ಆಗಿರಬಹುದು ಎಂದು ನುಡಿದರು.
ಸನ್ಮಾನ
2022ರ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ಉಪನ್ಯಾಸಕ ಜೇಸಿ. ವಿಶ್ವನಾಥ ಶೆಟ್ಟಿ. ಕೆ ಸನ್ಮಾನಿಸಲಾಯಿತು.
2022ರ ಘಟಕಾಧ್ಯಕ್ಷರಾದ ಜೇಸಿ ಹೆಚ್ ಜಿ ಎಫ್ ಜಯಂತಿ ಬಿ ಎಂ ರವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಜೇಸಿಗಳನ್ನು ಜಯಂತಿ ಬಿ ಎಂ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಪೂರ್ವ ಭಾಗದ ಅಧ್ಯಕ್ಷತೆಯನ್ನು ಜಯಂತಿ ಬಿ ಎಂ ವಹಿಸಿದರು.
ನೂತನವಾಗಿ ಸೇರ್ಪಡೆಗೊಂಡ 6 ಜನರಿಗೆ ವಲಯಾಧ್ಯಕ್ಷರಾದ ಜೆ ಎಫ್ ಡಿ ಪುರುಷೋತ್ತಮ ಶೆಟ್ಟಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಅಧಿಕಾರ ಸ್ವೀಕಾರ
ನೂತನವಾಗಿ ಆಯ್ಕೆಯಾದ ಜೇಸಿ ಹೆಚ್ ಜಿ ಎಫ್ ದಯಾಕರ ರೈ.ಕೆ.ಯಂ ರವರಿಗೆ ದ ನಿರ್ಗಮನ ಅಧ್ಯಕ್ಷರಾದ ಜಯಂತಿ ಬಿ ಎಂ ರವರು ಪ್ರಮಾಣ ವಚನವನ್ನು ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು. ನೂತನ ಕಾರ್ಯದರ್ಶಿ ಜೇಸಿ ಸುಚಿತ್ರಾ ಬಂಟ್ರಿಯಲ್ ರವರಿಗೆ ನಿರ್ಗಮನ ಕಾರ್ಯದರ್ಶಿ ಜೇಸಿ ಪ್ರವೀಣ್ ಕುಮಾರ್, ಮಹಿಳಾ ಜೇಸಿ ಅಧ್ಯಕ್ಷರಾದ ಜೇಸಿ ರಶ್ಮಾ ರೈ ಎನ್ ರವರಿಗೆ ಜೇಸಿ ಜಯಲಕ್ಷ್ಮಿ ಪ್ರಸಾದ್, ಜೇಜೇಸಿ ಅಧ್ಯಕ್ಷರಾದ ಗೌರವ್ ರವರಿಗೆ ಅಕ್ಷಯ್ ರವರು ಅಧಿಕಾರವನ್ನು ಹಸ್ತಾಂತರಿಸಿದರು.
ವೇದಿಕೆಯಲ್ಲಿ ಜೇಸಿಯ ವಲಯ ಉಪಾಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ, ಯೋಜನಾ ನಿರ್ದೇಶಕರಾದ ಜೇಸಿ ಹೆಚ್ ಜಿ ಎಫ್ ಪುರಂದರ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಜೇಸಿ ಘಟಕದ ಪೂರ್ವಧ್ಯಕ್ಷರುಗಳು, ಸದಸ್ಯರುಗಳು, ವಲಯದ 15 ರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಜೇಸಿ ರವೀಂದ್ರ ಟಿ ರವರು ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ಜಯಂತಿ ಬಿ ಎಂ ಸ್ವಾಗತಿಸಿದರು, ಕಾರ್ಯದರ್ಶಿ ಸುಚಿತ್ರ ಬಂಟ್ರಿಯಲ್ ವಂದಿಸಿದರು.