ನೆಲ್ಯಾಡಿ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ||ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ||

ಶೇರ್ ಮಾಡಿ

ನೇಸರ ಡಿ.21: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.21 ರಿಂದ ಡಿ.27 ರವರೆಗೆ ನಡೆಯಲಿದ್ದು. ಈ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆಯ ಸಮರ್ಪಣೆ ಕಾರ್ಯಕ್ರಮವು ಡಿಸೆಂಬರ್ 21ರಂದು ಬೆಳ್ಳಗ್ಗೆ ನೆಲ್ಯಾಡಿಯ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಇವರ ನೇತೃತ್ವದಲ್ಲಿ.

ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನೆಲ್ಯಾಡಿ -ಕೊಕ್ರಾಡಿ, ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ನೆಲ್ಯಾಡಿ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳು ನೆಲ್ಯಾಡಿ ವಲಯ, ವಿಷ್ಣುಮೂರ್ತಿ ಭಜನಾ ಮಂಡಳಿ ಪಡುಬೆಟ್ಟು, ಆದಿಶಕ್ತಿ ಭಜನಾ ಮಂಡಳಿ ಕೌಕ್ರಾಡಿ, ಸರ್ವಶಕ್ತಿ ಭಜನಾ ಮಂಡಳಿ ಕೌಕ್ರಾಡಿ, ಪ್ರಮುಖಿ ಭಜನಾ ಮಂಡಳಿ ಕೊಲ್ಯೋಟು-ನೆಲ್ಯಾಡಿ, ಇವರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಯಲ್ಲಿ ಶ್ರೀದೇವರಿಗೆ ಪೂಜೆಯನ್ನು ನೆರವೇರಿಸಿ. ಮೆರವಣಿಗೆಯ ಮೂಲಕ ಹಸಿರುವಾಣಿ ಹೊರೆಕಾಣಿಕೆಯನ್ನು ಕೊಂಡೊಯ್ಯಲಾಯಿತು.

ಈ ಸಂದರ್ಭದಲ್ಲಿ ತುಕಾರಾಮ ರೈ, ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಸದಾನಂದ ಕುಂದರ್, ಗುಡ್ಡಪ್ಪ ಶೆಟ್ಟಿ, ಸದಾನಂದ ಶೆಟ್ಟಿ, ಹರೀಶ್ ಶೆಟ್ಟಿ, ಚಂದ್ರಶೇಖರ ಬಾಣಜಾಲು, ವಿಠ್ಠಲಶೆಟ್ಟಿ, ಗಣೇಶ್ ಸಾಯಿ ಕೃಷ್ಣ ಭವನ, ಜನಾರ್ಧನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ವಿಜೇಶ್, ಸೇವಾಪ್ರತಿನಿಧಿ ನಮಿತ, ಕುಸುಮ, ಹೇಮಾವತಿ, ಪ್ರಶಾಂತ್ ಪುತ್ತಿಗೆ, ಒಕ್ಕೂಟದ ಅಧ್ಯಕ್ಷ ಹೇಮಚಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ನೂಜಿನ್ನಾಯ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು

Leave a Reply

error: Content is protected !!